ಕರ್ನಾಟಕ

karnataka

ETV Bharat / state

ಗುರುಮಠಕಲ್: 2ನೇ ಹಂತದ ಗ್ರಾ.ಪಂ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ - Gurumathkal second phase GP election

ನಾಳೆ ನಡೆಯಲಿರುವ ಎರಡನೇ ಹಂತದ ಗ್ರಾ.ಪಂ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅಪರ ಜಿಲ್ಲಾಧಿಕಾರಿ ಪ್ರಕಾಶ್​ ರಜಪೂತ ಅವರು ಮಸ್ಟರಿಂಗ್​ ಸೆಂಟರ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುರುಮಠಕಲ್
Gurumathkal

By

Published : Dec 26, 2020, 8:07 PM IST

ಗುರುಮಠಕಲ್:ನಾಳೆ ಎರಡನೇ ಹಂತದ ಗ್ರಾಮ‌ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಮಸ್ಟರಿಂಗ್ ಸೆಂಟರ್‌ಗೆ ಅಪರ ಜಿಲ್ಲಾಧಿಕಾರಿ ಪ್ರಕಾಶ್​ ರಜಪೂತ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಲೂಕಿನಲ್ಲಿ ಒಟ್ಟು 309 ಸ್ಥಾನಗಳಲ್ಲಿ, 68 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು ಹಾಗೂ 1 ಗಾಜರಕೋಟದ ಸ್ಥಾನದಲ್ಲಿ ನಾಮಪತ್ರ ಸಲ್ಲಿಸದಿರುವ ಕಾರಣ ತಾಲೂಕಿನ 234 ಸ್ಥಾನಗಳಿಗೆ ನಾಳೆ ಮತದಾನ ಜರುಗಲಿದೆ. ಮತದಾನಕ್ಕೆ ಸಕಲ ಸಿದ್ದತೆ ಮಾಡಿಕೊಂಡಿರುವುದಾಗಿ ಎಸಿ ಪ್ರಕಾಶ್​ ರಜಪೂತ ತಿಳಿಸಿದ್ದಾರೆ.

ಅಪರ ಜಿಲ್ಲಾಧಿಕಾರಿ ಪ್ರಕಾಶ್​ ರಜಪೂತ

ತಾಲೂಕಿನ ಒಟ್ಟು 17 ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ಜರುಗಲಿದ್ದು, ಶನಿವಾರದಂದು ಪಟ್ಟಣದ ಸರ್ಕಾರಿ ಪದವಿ ಕಾಲೇಜು ಕಟ್ಟಡದ ಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಚುನಾವಣಾ ಪರಿಕರಗಳನ್ನು ಹೊತ್ತು ಮತಗಟ್ಟೆ ಕೇಂದ್ರಗಳತ್ತ ತೆರಳಿದರು

ತಾಲೂಕಿನ ಚುನಾವಣೆ ನಡೆಯಲಿರುವ 234 ಸ್ಥಾನಗಳಿಗೆ 581 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, 133 ಮತಗಟ್ಟೆಗಳು ಸಿದ್ದಗೊಂಡಿದ್ದು, ಒಟ್ಟು 92,348 ಜನ ಮತದಾರರು ಭಾನುವಾರ ತಮ್ಮ ಮತ ಚಲಾಯಿಸಲಿದ್ದಾರೆ.

ಪೊಲೀಸ್ ಬಂದೋಬಸ್ತ್: ಶಾಂತಿಯುತ ಮತದಾನಕ್ಕಾಗಿ ಒಬ್ಬರು ಡಿವೈಎಸ್‌ಪಿ, ಇಬ್ಬರು ಸಿಪಿಐ, 3 ಜನ ಪಿಎಸ್‌ಐ, 8 ಜನ ಎಎಸ್‌ಐ, 40 ಜನ ಎಚ್‌ಸಿ, 91 ಜನ ಪಿಸಿ, 51 ಜನ ಹೋಂ ಗಾರ್ಡ್​ಸ್​ ಹಾಗೂ 9 ಮೊಬೈಲ್ ಪೊಲೀಸ್ ಸೆಕ್ಟರ್ ಹೀಗೆ ಒಟ್ಟು 208 ಸಿಬ್ಬಂದಿಯನ್ನು, 133 ಆರೋಗ್ಯ ಸಿಬ್ಬಂದಿಯನ್ನು ಹಾಗೂ ಒಟ್ಟು 598 ಜನ ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಎರಡನೇ ಹಂತ ಗ್ರಾಮ ಪಂಚಾಯಿತಿಗಳ ಚುನಾವಣೆ ಜರುಗಲಿರುವ ಎಲ್ಲ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್​ ರಜಪೂತ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ABOUT THE AUTHOR

...view details