ಗುರುಮಠಕಲ್:ಗುರುಮಠಕಲ್ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ಜೀವನ್ ಕಟ್ಟಿಮನಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಖಾಲಿ ಇದ್ದ ಹುದ್ದೆಗೆ ಶರಣಪ್ಪ ಮಡಿವಾಳ ಮುಖ್ಯಾಧಿಕಾರಿಯಾಗಿ ಆದೇಶ ಹೊರಡಿಸಿದ್ದರಿಂದ ಸೋಮವಾರ ಅಧಿಕಾರ ಸ್ವೀಕರಿಸಿದರು.
ಗುರುಮಠಕಲ್ ಪುರಸಭೆ ಮುಖ್ಯಾಧಿಕಾರಿಯಾಗಿ ಶರಣಪ್ಪ ಮಡಿವಾಳ ಅಧಿಕಾರ ಸ್ವೀಕಾರ - gurumatakal leatest news
ಗುರುಮಠಕಲ್ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನೂತನ ಪುರಸಭೆ ಮುಖ್ಯಾಧಿಕಾರಿಯಾಗಿ ಶರಣಪ್ಪ ಮಡಿವಾಳ ಅಧಿಕಾರ ಸ್ವೀಕರಿಸಿ ಮತ್ತು ಪುರಸಭೆ ಕಚೇರಿ ಸಿಬ್ಬಂದಿ, ಪುರಸಭೆ ಸದಸ್ಯರು ಸನ್ಮಾನಿಸಿದರು.
ಶರಣಪ್ಪ ಮಡಿವಾಳ ಮೊದಲು ವಾಡಿ ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿ ಕಾರ್ಯ ನಿರ್ವಹಿಸಿದರು. ರಾಜ್ಯ ಸರ್ಕಾರದ ಆದೇಶದ ಮೇರೆಗೆ ಗುರುಮಠಕಲ್ ಪುರಸಭೆ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ನಂತರ ಮಾತನಾಡಿದ ಅವರು, ಕಚೇರಿಯ ಪುರಸಭೆ ಸದಸ್ಯರು ಮತ್ತು ಪುರಸಭೆ ಸಿಬ್ಬಂದಿಯ ಸಹಕಾರ ಪಡೆದು ಪಟ್ಟಣದ ಅಭಿವೃದ್ಧಿಗೆ ಶ್ರಮವಹಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಸೋಗಳಕರ್, ಲೆಕ್ಕಾಧಿಕಾರಿ ಅನಿಲ್ ಕುಮಾರ್, ಪುರಸಭೆ ನೈರ್ಮಲ್ಯ ನಿರೀಕ್ಷಕ ಪ್ರಶಾಂತ್ ಸೂರ್ಯವಂಶಿ, ರಾಮುಲುಗೌಡ, ಶಶಿಕಾಂತ್, ಆಶೋಕಗೌಡ, ಬಸವರಾಜ, ಅಂಜೀ, ಶ್ರೀನಿವಾಸ, ರಾಕೇಶ್, ಶ್ರೀನಿವಾಸ ಯಾದವ್ ಉಪಸ್ಥಿತರಿದ್ದರು.