ಕರ್ನಾಟಕ

karnataka

ETV Bharat / state

ಕಾರ್ಮಿಕರಿಗೆ ಪಂಚಾಯತ್ ರಾಜ್ ಇಲಾಖೆಯಿಂದ ಆಹಾರ ಧಾನ್ಯಗಳ ಕಿಟ್​ ವಿತರಣೆ - ಯಾದಗಿರಿಯಲ್ಲಿ ಕೊರೊನಾ ಎಫೆಕ್ಟ್

ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಸವರಾಜ್ ಶರಬಯ್ಯ ಹಾಗೂ ಸಿಬ್ಬಂದಿ ವರ್ಗದಿಂದ 100 ಕುಟುಂಬಗಳಿಗೆ ಧವಸ ಧಾನ್ಯ, ಸ್ಯಾನಿಟೈಸರ್​,ಗ್ಲೌಸ್​ ಒಳಗೊಂಡಂತೆ ಕಾರ್ಮಿಕರರಿಗೆ ಕೆಲ ವಸ್ತುಗಳನ್ನು ವಿತರಿಸಲಾಯಿತು.

dqsdd
ಕಾರ್ಮಿಕರಿಗೆ ಪಂಚಾಯತ್ ರಾಜ್ ಇಲಾಖೆಯಿಂದ ಆಹಾರ ಧಾನ್ಯಗಳ ಕಿಟ್​ ವಿತರಣೆ!

By

Published : May 2, 2020, 1:44 PM IST

ಗುರುಮಿಠಕಲ್:ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಧಿಕಾರಿ ಬಸವರಾಜ್ ಶರಬಯ್ಯ ಹಾಗೂ ಸಿಬ್ಬಂದಿ ವರ್ಗದಿಂದ 100 ಕುಟುಂಬಗಳಿಗೆ ದವಸ ಧಾನ್ಯ, ಸ್ಯಾನಿಟೈಸರ್​,ಗ್ಲೌಸ್​ ಒಳಗೊಂಡಂತೆ ಕಾರ್ಮಿಕರರಿಗೆ ಕೆಲ ವಸ್ತುಗಳನ್ನು ವಿತರಿಸಲಾಯಿತು.

ಕಾರ್ಮಿಕರಿಗೆ ಪಂಚಾಯತ್ ರಾಜ್ ಇಲಾಖೆಯಿಂದ ಆಹಾರ ಧಾನ್ಯಗಳ ಕಿಟ್​ ವಿತರಣೆ!

ಆಹಾರ ಧಾನ್ಯಗಳ ಪೊಟ್ಟಣದಲ್ಲಿ 5 ಕೆ.ಜಿ. ಗೋದಿ ಹಿಟ್ಟು, 5 ಕೆಜಿ ಅಕ್ಕಿ, ಬೇಳೆ 1 ಕೆಜಿ ಎಣ್ಣೆ, ಬಟ್ಟೆ, ಸ್ನಾನದ ಸಾಬೂನು, ಪೇಸ್ಟ್, ಅರಿಶಿಣ, ಉಪ್ಪು, ಖಾರದ ಪುಡಿ ಸೇರಿದಂತೆ ಕುಟುಂಬಕ್ಕೆ ಬೇಕಾದ ಎಲ್ಲ ಕಿರಾಣಿ ಸಾಮಾಗ್ರಿಗಳನ್ನು ವಿತರಿಸಿದರು. ಮೇ 1ರ ಕಾರ್ಮಿಕ, ಶ್ರಮಿಕರ ದಿನಾಚರಣೆಯನ್ನು ಗುರುಮಿಠಕಲ್ ತಾಲೂಕು ಘಟಕದ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಬಡ ಕೂಲಿ ಕಾರ್ಮಿಕರಿಗೆ ಪಡಿತರ ಕಿಟ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಶರಭೈ ಹೇಳಿದರು.

ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಸಂಘದ ಪಡಿತರ ವಿತರಣೆ ಕಿಟ್ ವಿತರಿಸಿ ಮಾತನಾಡಿದ ಅವರು, ಪಟ್ಟಣದ ಹಲವಾರು ಕಡೆ ಶ್ರಮಿಕ ವರ್ಗದವರು, ಕಾರ್ಮಿಕರು ಹೊರರಾಜ್ಯದ ವಲಸೆಗಾರರು ಯಾರೂ ಲಾಕ್​ಡೌನ್​ನಿಂದ ತೊಂದರೆಗೆ ಒಳಗಾಗಬೇಕಿಲ್ಲ. ಕೃಷಿ ಕಾರ್ಮಿಕರು ಸೇರಿದಂತೆ ಇತರೆ ಕಾರ್ಮಿಕರಿಗೆ ಪಂಚಾಯತ್ ಇಲಾಖೆಯಿಂದ ಹಲವಾರು ಯೋಜನೆಗಳು ರೂಪಿತವಾಗಿವೆ. ಸಂಬಂಧಿತ ಅಧಿಕಾರಿಗಳನ್ನು ಭೇಟಿಯಾಗಿ ಗರಿಷ್ಠ 100 ದಿನಗಳ ಕಾಲ ದಿನಗೂಲಿ ಆಧಾರಿತ ಕೆಲಸ ಮಾಡಿ ತಮ್ಮ ಕುಟುಂಬವನ್ನು ನೋಡಿಕೊಳ್ಳಬೇಕು. ಅಲ್ಲದೆ ಈ ಪರಿಸ್ಥಿತಿಯಲ್ಲಿ ಯಾರೂ ಉಪವಾಸದಿಂದ ಬಳಲಬಾರದು ಎಂಬ ಉದ್ದೇಶದಿಂದ ಇಲಾಖೆ ಮಾಡಿದ ಕಾರ್ಯವನ್ನು ಶ್ಲಾಘಿಸಿದರು.

ABOUT THE AUTHOR

...view details