ಯಾದಗಿರಿ:ಬೆಂಗಳೂರಿನ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ-2020ರ ಸಂಬಂಧವಾಗಿ ಅಂತಿಮ ಮತದಾರ ಪಟ್ಟಿಯನ್ನು ತಯಾರಿಸಿ ಯಾದಗಿರಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯ, ಸಹಾಯಕ ಆಯುಕ್ತರ ಕಾರ್ಯಲಯ ಯಾದಗರಿ, ತಹಶೀಲ್ದಾರ್ ಕಾರ್ಯಲಾಯ ಶಹಾಪುರ, ಸುರುಪುರ, ಗುರುಮಿಠಕಲ್, ವಡಗೇರಾ, ಮತ್ತು ಹುಣಸಗಿ ತಾಲೂಕು ಪಂಚಾಯಿತಿ ಕಾರ್ಯಲಯಗಳಲ್ಲಿ ಹಾಗೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಾರ್ಯಲಯಗಳಲ್ಲಿ ಆಗಸ್ಟ್ 31ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಚಾರ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ರಾಗಪ್ರಿಯಾ ಆರ್ ಅವರು ತಿಳಿಸಿದ್ದಾರೆ.
ಚುನಾವಣೆ ನಡೆಯುವ ಗ್ರಾಮ ಪಂಚಾಯತಿಗಳ ಅಂತಿಮ ಮತದಾರರ ಪಟ್ಟಿಯಲ್ಲಿರುವ ತಾಲೂಕುವಾರು ಮತದಾರರ ಸಂಖ್ಯೆಗಳು ಇಂತಿವೆ. ಶಹಾಪುರ ತಾಲೂಕಿನ 24 ಗ್ರಾ.ಪಂ.ಗಳ ಒಟ್ಟು 193 ಮತಗಟ್ಟೆಗಳು ಇದ್ದು, ಪುರುಷರು 78,722, ಮಹಿಳೆಯರು 78,873, ಇತರೆ 1 ಸೇರಿ ಒಟ್ಟು ಮತದಾರರ ಸಂಖ್ಯೆ 1,57,596 ಆಗಿದೆ.
ಯಾದಗಿರಿ ತಾಲೂಕಿನ 22 ಗ್ರಾ.ಪಂ.ಗಳ ಒಟ್ಟು 205 ಮತಗಟ್ಟೆಗಳಿದ್ದು, ಪುರುಷರು 78,393, ಮಹಿಳೆಯರು 79,159, ಇತರೆ 3 ಸೇರಿ ಒಟ್ಟು ಮತದಾರರ ಸಂಖ್ಯೆ 1,57,555 ಆಗಿದೆ. ಸುರಪುರ ತಾಲೂಕಿನ 21 ಗ್ರಾ.ಪಂ.ಗಳ ಒಟ್ಟು 150 ಮತಗಟ್ಟೆಗಳು ಇದ್ದು, ಪುರುಷರು 60,111, ಮಹಿಳೆಯರು 59,217, ಇತರೆ 4 ಸೇರಿ ಒಟ್ಟು ಮತದಾರರ ಸಂಖ್ಯೆ 1,19,332 ಆಗಿದೆ.
ಹುಣಸಗಿ ತಾಲೂಕಿನ 18 ಗ್ರಾ.ಪಂ.ಗಳ ಒಟ್ಟು 145 ಮತಗಟ್ಟೆಗಳು ಇದ್ದು, ಪುರುಷರು 58,753, ಮಹಿಳೆಯರು 56,980, ಇತರೆ 11 ಸೇರಿ ಒಟ್ಟು ಮತದಾರರ ಸಂಖ್ಯೆ 1,15,744 ಆಗಿದೆ. ವಡಗೇರಾ ತಾಲೂಕಿನ 17 ಗ್ರಾ.ಪಂ.ಗಳ ಒಟ್ಟು 116 ಮತಗಟ್ಟೆಗಳು ಇದ್ದು, ಪುರುಷರು 47,775, ಮಹಿಳೆಯರು 47,214, ಇತರೆ 2 ಸೇರಿ ಒಟ್ಟು ಮತದಾರರ ಸಂಖ್ಯೆ 94,991 ಆಗಿದೆ. ಗುರುಮಿಠಕಲ್ ತಾಲೂಕಿನ 17 ಗ್ರಾ.ಪಂ.ಗಳ ಒಟ್ಟು 126 ಮತಗಟ್ಟೆಗಳು ಇದ್ದು, ಪುರುಷರು 52,801, ಮಹಿಳೆಯರು 53,306, ಇತರೆ 2 ಸೇರಿ ಒಟ್ಟು ಮತದಾರರ ಸಂಖ್ಯೆ 1,06,109 ಆಗಿದೆ.
ಜಿಲ್ಲೆಯಲ್ಲಿ ಒಟ್ಟು 119 ಗ್ರಾಮ ಪಂಚಾಯಿತಿಗಳಿದ್ದು, 935 ಮತಗಟ್ಟೆಗಳಲ್ಲಿ ಪುರುಷರು 3,76,555, ಮಹಿಳೆಯರು 3,74,749, ಇತರೆ 23 ಸೇರಿ ಒಟ್ಟು 7,51,327 ಮತದಾರರ ಇದ್ದಾರೆ ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.