ಸುರಪುರ: ಮಡುವಿನಲ್ಲಿ ಬಿದ್ದಿದ್ದ ಕುರಿಗಾಯಿಯನ್ನು ರಕ್ಷಿಸಿ ಬಾಲಕಿಯೋರ್ವಳು ಪ್ರಾಣ ಕಳೆದುಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಮೀಪದಲ್ಲಿರುವ ಅಡಕಲ್ ಬಂಡೆಯಲ್ಲಿ ಕುರಿಗಾಹಿ ನೀರು ಕುಡಿಯಲು ಹೋಗಿದ್ದ. ಆಗ ಆತ ಕಾಲು ಜಾರಿ ಮಡುವಿನಲ್ಲಿ ಬಿದ್ದಿದ್ದಾನೆ. ಈ ಸಮಯದಲ್ಲಿ ಅಲ್ಲೇ ಇದ್ದ ಬಾಲಕಿ ರಾಜಮ್ಮ(16) ಕುರಿಗಾಹಿಯ ಕೈ ಹಿಡಿದು ಮೇಲೆತ್ತಿದ್ದಾಳೆ. ಆದರೆ ದುರಾದೃಷ್ಟವಶಾತ್ ಬಾಲಕಿ ಕಾಲು ಜಾರಿ ಬಿದ್ದು ನೀರಿನಲ್ಲಿ ಸಾವನ್ನಪ್ಪಿದಳು. ಮೃತ ಬಾಲಕಿಯನ್ನು ಶಂಕ್ರಪ್ಪ ವಡ್ಡರ್ ಎಂಬುವವರ ಮಗಳು ಎಂದು ಗುರುತಿಸಲಾಗಿದೆ.