ಕರ್ನಾಟಕ

karnataka

ETV Bharat / state

ಯಾದಗಿರಿ: ಭಾರಿ ಅಗ್ನಿ ಅವಘಡ, 112 ವಾಹನ ಸಿಬ್ಬಂದಿಯಿಂದ ನಾಲ್ವರ ರಕ್ಷಣೆ - ಯಾದಗಿರಿಯಲ್ಲಿ ಗ್ಯಾಸ್​ ಸಿಲಿಂಡರ್​ ಸ್ಪೋಟ

ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯಲ್ಲಿದ್ದ ಗ್ಯಾಸ್​ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಕಿಲ್ಲನಕೇರಾ ಗ್ರಾಮದಲ್ಲಿ ನಡೆದಿದೆ.

Gas cylinder explosion
ಗ್ಯಾಸ್​ ಸಿಲಿಂಡರ್ ಸ್ಪೋಟ

By

Published : Mar 20, 2022, 8:20 PM IST

ಯಾದಗಿರಿ: ಜಿಲ್ಲೆಯ ಕಿಲ್ಲನಕೇರಾ ಗ್ರಾಮದ ಹೊರವಲಯದಲ್ಲಿರುವ 150 ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ರಸ್ತೆ ಪಕ್ಕದಲ್ಲಿದ್ದ ಸಾಬರೆಡ್ಡಿ ಬನ್ನಪ್ಪ ಅವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯಲ್ಲಿದ್ದ ಗ್ಯಾಸ್​ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ.

ಯಾದಗಿರಿಯಲ್ಲಿ ಗ್ಯಾಸ್​ ಸಿಲಿಂಡರ್​ ಸ್ಫೋಟ

ಈ ಸಂದರ್ಭದಲ್ಲಿ 112 ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈರಣ್ಣ (ಹೆಚ್‌ಸಿ) ಮತ್ತು ಅವಿನಾಶ (ಪಿಸಿ) ಸ್ಥಳದಲ್ಲಿನ ನಾಲ್ವರನ್ನು ರಕ್ಷಣೆ ಮಾಡಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಅಗ್ನಿ ನಂದಿಸುವಲ್ಲಿ ಸಹಾಯ ಮಾಡಿದ್ದಾರೆ. ಇವರ ಕರ್ತವ್ಯನಿಷ್ಠೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಮನೆಯಲ್ಲಿದ್ದ ಬನ್ನಮ್ಮ (60), ಸಾಬರೆಡ್ಡಿ (30), ವೆಂಕಪ್ಪ (26), ಭುವನ (5), ದೀಕ್ಷಾ (5), ಭಾಗೇಶ (12) ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಓದಿ:ಯಶಸ್ವಿನಿ ಯೋಜನೆ ಮರು ಜಾರಿ : ಸಿಎಂ ಬೊಮ್ಮಾಯಿ ಘೋಷಣೆ

ABOUT THE AUTHOR

...view details