ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಬಸವಸಾಗರ ಜಲಾಶಯದಿಂದ ಕೃಷ್ಣ ನದಿಗೆ 6.5 ಲಕ್ಷ ಕ್ಯೂಸೆಕ್ ನೀರು ಹರಿ ಬಿಡಲಾಗಿದ್ದು, ಜಿಲ್ಲೆಯ ಜನರನ್ನ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು... ಗ್ರಾಮಸ್ಥರು ಗಂಜಿ ಕೇಂದ್ರಕ್ಕೆ ಸ್ಥಳಾಂತರ - villagers relocate to the porridge center
ಜಿಲ್ಲೆಯ ಹುಣಸಗಿ ತಾಲೂಕಿನ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 6.5 ಲಕ್ಷ ಕ್ಯೂಸೆಕ್ ನೀರು ಹರಿ ಬಿಡಲಾಗಿದ್ದು, ಜಿಲ್ಲೆಯ ಜನರನ್ನ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡೆ ,ಶೆಳ್ಳಗಿ, ಹೆಮ್ಮಡಗಿ, ಸೂಗೂರ ಗ್ರಾಮಗಳು ಮುಳುಗುವ ಸಾಧ್ಯತೆಯಲ್ಲಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಶೆಳ್ಳಿಗಿ ಗ್ರಾಮಸ್ಥರು ಈಗಾಗಲೇ ಸುರಪುರ ಎಪಿಎಂಸಿ ಆವರಣಕ್ಕೆ ಸ್ಥಳಾಂತರಗೊಂಡಿದ್ದಾರೆ. ಶಹಾಪುರ ತಾಲೂಕಿನ ಕೊಳ್ಳೂರು ಬ್ರಿಡ್ಜ್, ಗೌಡಗೇರಾ, ಮರಕಲ್, ಯಕ್ಷಂತಿ ಗ್ರಾಮಗಳು ಆತಂಕದಲ್ಲಿದ್ದು, ಯಾವುದೇ ಸಮಯದಲ್ಲಾದರೂ ಕೃಷ್ಣ ನದಿ ನೀರು ಮನೆಗಳಿಗೆ ನುಗ್ಗುವ ಸಾಧ್ಯತೆಯಿದೆ. ಹೀಗಾಗಿ ಗ್ರಾಮಸ್ಥರನ್ನು ಹತ್ತಗೂಡರು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಯಾದಗಿರಿ ತಾಲೂಕಿನ ಕೌಳೂರ್, ಗೂಗಲ್, ಮರಕಲ್ ಗ್ರಾಮಗಳಲ್ಲಿ ಕೃಷ್ಣ ನದಿಯು ಆರ್ಭಟಿಸುತ್ತಿದ್ದು, ಗ್ರಾಮಸ್ಥರನ್ನು ಜಿಲ್ಲಾಡಳಿತ ಕರ್ನಾಟಕ ರಾಜ್ಯ ಸಾರಿಗೆ ಬಸ್ಗಳ ಮೂಲಕ ಗಂಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಿದೆ. ಇನ್ನು, ಸಾರ್ವಜನಿಕರು ನದಿ ಪಾತ್ರದ ಹತ್ತಿರ ಹೋಗದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.