ಯಾದಗಿರಿ: ತಾಲೂಕಿನ ಕೆಂಭಾವಿ ಪಟ್ಟಣದಲ್ಲಿನ ಗಾಯತ್ರಿ ಮಹಿಳಾ ಮಂಡಳಿ ನಡೆಸುತ್ತಿದ್ದ ರೇಷನ್ ಅಂಗಡಿಯಲ್ಲಿ ಪಡಿತರ ವಿತರಣೆಯಲ್ಲಿ ವಂಚನೆ ನಡೆಸುತ್ತಿದ್ದ ಕುರಿತು ಈಟಿವಿ ಭಾರತ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾ ಆಹಾರ ಇಲಾಖೆಯ ಉಪ ನಿರ್ದೇಶಕರು ಅಂಗಡಿಯ ಪರವಾನಗಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈಟಿವಿ ಭಾರತ ಇಂಪ್ಯಾಕ್ಟ್: ವಂಚನೆ ಮಾಡುತ್ತಿದ್ದ ರೇಷನ್ ಅಂಗಡಿ ಪರವಾನಗಿ ಅಮಾನತು - ಕೆಂಭಾವಿ
ಪಡಿತರ ವಿತರಣೆಯಲ್ಲಿ ವಂಚನೆ ಎಸಗುತ್ತಿದ್ದ ಕೆಂಭಾವಿ ಪಟ್ಟಣದ ಗಾಯತ್ರಿ ಮಹಿಳಾ ಮಂಡಳಿ ನಡೆಸುತ್ತಿದ್ದ ರೇಷನ್ ಅಂಗಡಿಯನ್ನು ಅಮಾನತುಗೊಳಿಸಿ ಜಿಲ್ಲಾ ಆಹಾರ ಇಲಾಖೆಯ ಉಪ ನಿರ್ದೇಶಕರು ಆದೇಶ ಹೊರಡಿಸಿದೆ.

ಮಲ್ಲಿಕಾರ್ಜುನ ಬಡಿಗೇರ
ಕಳೆದ 17ನೇ ತಾರೀಖಿನಂದು ಕೆಂಭಾವಿಯ ಗಾಯತ್ರಿ ಮಹಿಳಾ ಮಂಡಳಿ ನಡೆಸುವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರದಾರರಿಗೆ ಕಡಿಮೆ ಪಡಿತರ ವಿತರಣೆ ಮಾಡಿರುವ ಕುರಿತು ಪಡಿತರ ಚೀಟಿದಾರ ಮಲ್ಲಿಕಾರ್ಜುನ ಬಡಿಗೇರ ಅವರ ಹೇಳಿಕೆಯೊಂದಿಗೆ ವರದಿ ಪ್ರಸಾರ ಮಾಡಲಾಗಿತ್ತು.
ಮಲ್ಲಿಕಾರ್ಜುನ ಬಡಿಗೇರ
ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆಹಾರ ಇಲಾಖೆ ಉಪ ನಿರ್ದೇಶಕರ ಮಾರ್ಗದರ್ಶನದಂತೆ ತಾಲೂಕು ಆಹಾರ ಇಲಾಖೆಯ ನಿರೀಕ್ಷಕ ಅಪ್ಪಯ್ಯ ಹಿರೇಮಠ ಅವರು ಪ್ರಕಣದ ಕುರಿತು ವಿಚಾರಣೆ ನಡೆಸಿ, ವರದಿ ನೀಡಿದ್ದರ ಪರಿಣಾಮ ಜಿಲ್ಲಾ ಆಹಾರ ಇಲಾಖೆ ಉಪ ನಿರ್ದೇಶಕರು ಏಪ್ರಿಲ್ 30 ರಂದು ರೇಷನ್ ಅಂಗಡಿ ಅಮಾನತಿಗೆ ಆದೇಶ ನೀಡಿದ್ದಾರೆ.