ಯಾದಗಿರಿ:ಕಾಂಗ್ರೆಸ್ ಮತ್ತು ಜೆಡಿಎಸ್ ನ ಕೆಲ ನಾಯಕರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದು, ಬಿಜೆಪಿ ಹೈಕಮಾಂಡ್ ಸಿಗ್ನಲ್ಗಾಗಿ ಕಾದು ಕುಳಿತಿದ್ದಾರೆ ಅಂತ ಯಾದಗಿರಿಯಲ್ಲಿ ಮಾಜಿ ಸಚಿವ ಹಾಗೂ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಹೇಳಿದ್ದಾರೆ.
ಕೈ-ದಳ ನಾಯಕರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ: ಬಾಬುರಾವ್ ಚಿಂಚನಸೂರ - ಬಾಬುರಾವ್ ಚಿಂಚನಸೂರ ಸುದ್ದಿಗೋಷ್ಟಿ
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕೆಲ ನಾಯಕರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದು, ಬಿಜೆಪಿ ಹೈಕಮಾಂಡ್ ಸಿಗ್ನಲ್ಗಾಗಿ ಕಾದು ಕುಳಿತಿದ್ದಾರೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿದ್ದಾರೆ.
ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕೈ ಮತ್ತು ದಳ ಸಂಪೂರ್ಣ ವಾಷೌಟ್ ಆಗುತ್ತೆ ಯಾಕಂದ್ರೆ, ಕಾಂಗ್ರೆಸ್ ಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಾಯಕರೇ ಇಲ್ಲ, ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಬಿಜೆಪಿಗೆ ಬರ್ತಾರೆ ಅಂತಾ ಭವಿಷ್ಯ ನುಡಿದಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಬರ್ತ್ ಡೇಗೆ ಬಂದು ಅವರ ಬಗ್ಗೆ ಸಿದ್ದರಾಮಯ್ಯ ಹಾಡಿ ಹೊಗಳಿದ್ದಾರೆ. ಇದ್ರ ಮೇಲೆ ನೀವೇ ಅರ್ಥೈಸಿಕೊಳ್ಳಿ ಎಂದು ಚಿಂಚನಸೂರ ಸೂಚ್ಯವಾಗಿ ಹೇಳಿದ್ರು.
ಇನ್ನು ರಾಜಕೀಯದಲ್ಲಿ ಯಾರೂ ಮಿತ್ರರೂ ಅಲ್ಲ, ಯಾರು ಶತ್ರುಗಳು ಸಹ ಅಲ್ಲ. ಯಾವಾಗ ಬೇಕು ಅವಾಗ ದುಶ್ಮನ್ ಗಳಾಗುತ್ತೇವೆ, ಯಾವಾಗ ಬೇಕು ಆವಾಗ ನಾವು ಮಿತ್ರರೂ ಆಗ್ತೇವೆ. ಇನ್ನು ನಾಳೆ ಬಜೆಟ್ ನಲ್ಲಿ ಚೌಡಯ್ಯ ನಿಗಮಕ್ಕೆ ಸಿಎಂ ಅನುದಾನ ನೀಡ್ತಾರೆ. ಈ ಬಗ್ಗೆ ಸಿಎಂ ಅವರೆ ಹೇಳಿದ್ದಾರೆ ನಾಳೆ ನೋಡಿ ಗೊತ್ತಾಗುತ್ತೆ ಅಂತಾ ಹೇಳಿದ್ರು. ಇನ್ನು ಮುಂದಿನ ದಿನಗಳಲ್ಲಿ ಕೋಲಿ ಸಮುದಾಯದ ಮುಖಂಡನಿಗೆ ಎಂಎಲ್ಸಿ ಮಾಡಿ ಮಂತ್ರಿ ಮಾಡಬೇಕು ಅಂತ ಅವರ ಮನಸ್ಸಲ್ಲಿದೆ ಅಂತ ತಿಳಿಸಿದ್ರು.