ಸುರಪುರ: ತಾಲೂಕಿನ ಕೆಂಭಾವಿ ಬಳಿಯ ಎಮ್.ಬೊಮ್ಮನಹಳ್ಳಿ ಗ್ರಾಮದ ರೈತ ಗುತ್ತಪ್ಪಗೌಡ ಬಿರಾದಾರ್ (41 ವರ್ಷ) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ರೈತ 10 ಎಕರೆ 23 ಗುಂಟೆ ಜಮೀನು ಹೊಂದಿದ್ದು, ಸಹಕಾರ ಸಂಘದಲ್ಲಿ 40 ಸಾವಿರ, ಕೆಂಭಾವಿ ಎಸ್.ಬಿ.ಐ ಶಾಖೆಯಲ್ಲಿ 1.50 ಲಕ್ಷ ಹಾಗೂ 4 ಲಕ್ಷ ರೂಪಾಯಿಗಳ ಕೈಸಾಲ ಮಾಡಿಕೊಂಡಿದ್ದರು. ಆದ್ರೆ, ಸರಿಯಾದ ಬೆಳೆಯೂ ಬಾರದೆ, ಸಾಲಗಾರರಿಗೆ ಉತ್ತರ ಕೊಡಲಾಗದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ಮೃತ ವ್ಯಕ್ತಿಯ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.