ಯಾದಗಿರಿ: ಜಿಲ್ಲೆಯ ಶಹಾಪುರ ಮತ್ತು ವಡಗೇರಾ ತಾಲೂಕಿನ ಗ್ರಾಮಗಳಲ್ಲಿ ಭಾರಿ ಮಳೆ ಮತ್ತು ಪ್ರವಾಹಕ್ಕೆ ಭೀಮಾ ತೀರದ ಗ್ರಾಮಗಳು ನಲುಗಿವೆ. ಈ ಗ್ರಾಮಗಳ ನೆರೆ ಸಂತ್ರಸ್ತರಿಗೆ ಸುಧಾಮೂರ್ತಿಯವರ ಇನ್ಪೋಸಿಸ್ ಫೌಂಡೇಶನ್ ಮತ್ತು ರಾಮಕೃಷ್ಣ ಆಶ್ರಮ ಪಾವಗಡ ವತಿಯಿಂದ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ಇನ್ಪೋಸಿಸ್ ಫೌಂಡೇಶನ್ ವತಿಯಿಂದ ನೆರೆ ಸಂತ್ರಸ್ತರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ - Yadgiri Latest Update News
ಸುಧಾಮೂರ್ತಿಯವರ ಇನ್ಪೋಸಿಸ್ ಫೌಂಡೇಶನ್ ಮತ್ತು ರಾಮಕೃಷ್ಣ ಆಶ್ರಮ ಪಾವಗಡ ವತಿಯಿಂದ ಹುರಸಗುಂಡಿಗಿ, ನಾಯ್ಕಲ, ಹಾಲಗೇರಾ, ರೋಜಾ, ಶಿವನೂರ ಗ್ರಾಮಗಳ ನೆರೆ ಸಂತ್ರಸ್ತರಿಗೆ 1,200 ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ಹುರಸಗುಂಡಿಗಿ, ನಾಯ್ಕಲ, ಹಾಲಗೇರಾ, ರೋಜಾ, ಶಿವನೂರ ಗ್ರಾಮಗಳ ನೆರೆ ಸಂತ್ರಸ್ತರಿಗೆ 1,200 ಆಹಾರ ಧಾನ್ಯಗಳ ಕಿಟ್ಗಳನ್ನು ವಿತರಿಸಲಾಯಿತು. ಇನ್ಫೋಸಿಸ್ ತಂಡದ ಸಲಹೆಗಾರ ಮಹೇಶ ಕುಮಾರ ಮತ್ತು ತಂಡ ಹಾಗೂ ಪಾವಗಡ ರಾಮಕೃಷ್ಣ ಸೇವಾಶ್ರಮದ ತಂಡದವರು ಆಹಾರ ಕಿಟ್ಗಳನ್ನು ವಿತರಿಸಿದರು. ಈ ವೇಳೆ ಮಾತನಾಡಿದ ಮಹೇಶ ಕುಮಾರ, ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಯಾದಗಿರಿ ಜಿಲ್ಲೆಯ ಹಲವು ಗ್ರಾಮಗಳು ಹಾಗೂ ಕಲಬುರಗಿ ಜಿಲ್ಲೆಯ ಚಿತ್ತಾಪುರ, ಅಫ್ಜಲ್ಪುರ ಸೇರಿದಂತೆ ಉತ್ತರ ಕರ್ನಾಟಕದ ನೆರೆ ಗ್ರಾಮಗಳಿಗೆ ಸಹಾಯ ಮಾಡುತ್ತಿರುವ ಬಗ್ಗೆ ತಿಳಿಸಿದರು.
2010ರಲ್ಲಿ ರಾಯಚೂರು, ಕಲಬುರಗಿ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ನೆರೆಹಾವಳಿಯಿಂದ ತುತ್ತಾದವರಿಗೆ ಸಾವಿರಾರು ಮನೆಗಳನ್ನು ನಿರ್ಮಿಸಿ ಕೊಡಲಾಯಿತು. 400 ಶೌಚಾಲಯಗಳನ್ನು ಸರ್ಕಾರದ ಜೊತೆಗೆ ಪರಿಶುದ್ಧ ಯೋಜನೆಯಡಿ ನಿರ್ಮಿಸಿ ಕೊಡಲಾಗಿದೆ. ಉತ್ತರ ಕರ್ನಾಟಕದಲ್ಲಿಯೂ ಕೂಡ ಇನ್ಫೋಸಿಸ್ ಸಂಸ್ಥೆ ಹೆಚ್ಚಿನ ಸಹಾಯ ಮಾಡಿದೆ ಎಂದರು.