ಯಾದಗಿರಿ:ಜಿಲ್ಲೆಯ ಜನರಿಗೆ ಮತ್ತೆ ಜಲಕಂಟಕ ಎದುರಾಗಬಹುದಾದ ಸಾಧ್ಯತೆ ಹೆಚ್ಚಾಗಿದ್ದು, ಜನರು ಆತಂಕದಿಂದಿದ್ದಾರೆ.
ಮತ್ತೆ ಆರ್ಭಟಿಸಲು ಸಿದ್ಧಳಾಗಿದ್ದಾಳೆ ಕೃಷ್ಣೆ: ಜಿಲ್ಲೆಯ ಜನರಿಗೆ ಮತ್ತೆ ಜಲಕಂಟಕ ಭೀತಿ ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆ ಮತ್ತೆ ಕೃಷ್ಣೆ ಆರ್ಭಟಿಸಲು ಸಿದ್ಧಳಾಗಿದ್ದಾಳೆ ಎಂದು ಸ್ಥಳೀಯರು ಹಾಗೂ ಕೆಬಿಜೆಎನ್ಎಲ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ನಾರಾಯಣಪುರ ಬಸವ ಸಾಗರ ಜಲಾಶಯದ ಒಳಹರಿವು ಹೆಚ್ಚಾದ ಹಿನ್ನೆಲೆ ಸುಮಾರು ಎರಡೂವರೆ ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಈಗಾಗಲೇ ಶಹಾಪುರ ಹಾಗೂ ಸುರಪುರ ವಿಧನಾಸಭಾ ಕ್ಷೇತ್ರದ ಗ್ರಾಮಗಳು ಕೃಷ್ಣೆಯಿಂದ ಜಲಕಂಟಕ ಎದುರಿಸುತ್ತಿವೆ.
ಸುರಪುರ ಕ್ಷೇತ್ರದ ನೀಲಕಂಠರಾಯನ ಗಡ್ಡೆ, ಶೆಳ್ಳಗಿ, ಶಹಾಪುರ ಕ್ಷೇತ್ರದ ಕೋಳ್ಳೂರ ಬ್ರಿಡ್ಜ್ಗಳು, ಗ್ರಾಮಗಳ ಜಮೀನುಗಳೂ ಕೂಡ ಸಂಪೂರ್ಣವಾಗಿ ಜಲಾವೃತವಾಗಿವೆ. ಈ ಹಿನ್ನೆಲೆ ಮತ್ತೆ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಹರಿಬಿಡುತ್ತಿದ್ದು, ಜನರು ಭಯಭೀತರಾಗಿದ್ದಾರೆ.