ಕರ್ನಾಟಕ

karnataka

ETV Bharat / state

ಯಾದಗಿರಿ ಜಿಲ್ಲೆ ಭೀಮಾ ತೀರದಲ್ಲಿ ಹೆಚ್ಚಿದ ಪ್ರವಾಹ ಭೀತಿ; ರಕ್ಷಣಾ ಕಾರ್ಯಾಚರಣೆಗೆ ಸಿದ್ಧತೆ - ಯಾದಗಿರಿಯಲ್ಲಿ ಪ್ರವಾಹ ಸಾಧ್ಯತೆ ಮುಂಜಾಗ್ರತಾ ಕ್ರಮ

ಯಾದಗಿರಿ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತಷ್ಟು ಪ್ರವಾಹ ಹೆಚ್ಚಾಗುವ ಸಾಧ್ಯತೆಗಳಿದ್ದು, ಜಿಲ್ಲಾಡಳಿತ ಈಗಾಗಲೇ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

Yadagiri
ಭೂಸೇನಾ ಪಡೆ

By

Published : Oct 19, 2020, 9:36 PM IST

ಯಾದಗಿರಿ:ಸನ್ನತಿ ಬ್ಯಾರೇಜ್​ನಿಂದ ಭೀಮಾ ನದಿಗೆ ಬಿಡುತ್ತಿರುವ ಭಾರಿ ಪ್ರಮಾಣದ ನೀರಿನಿಂದಾಗಿ ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ನದಿ ಪಾತ್ರದಲ್ಲಿ ಮತ್ತಷ್ಟು ಪ್ರವಾಹ ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಜನರ ಸುರಕ್ಷತಾ ದೃಷ್ಟಿಯಿಂದ ಜಿಲ್ಲೆಗೆ ಭೂಸೇನಾ ಪಡೆ ಬಂದಿಳಿಯುವ ಮೂಲಕ ತನ್ನ ಕಾರ್ಯ ಚುರುಕುಗೊಳಿಸಿದೆ.

ಯಾದಗಿರಿಯಲ್ಲಿ ಪ್ರವಾಹ ಹೆಚ್ಚಾಗುವ ಸಾಧ್ಯತೆಗಳಿದ್ದು ಜನರ ಸುರಕ್ಷತಾ ದೃಷ್ಟಿಯಿಂದ ಜಿಲ್ಲೆಗೆ ಭೂಸೇನಾ ಪಡೆ ತಮ್ಮ ಕಾರ್ಯವನ್ನು ಚುರುಕುಗೊಳಿಸಿದೆ.

ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತಷ್ಟು ಪ್ರವಾಹ ಹೆಚ್ಚಾಗುವ ಸಾಧ್ಯತೆಗಳಿದ್ದು, ಜಿಲ್ಲಾಡಳಿತ ಈಗಾಗಲೇ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ನದಿ ಪಾತ್ರದ ಜನರ ರಕ್ಷಣೆಗೆ ಭಾರತೀಯ ಭೂಸೇನಾ ಪಡೆ ಕೂಡ ಯಾದಗಿರಿ ಜಿಲ್ಲೆಗೆ ಬಂದಿಳಿದಿದೆ. ಸೇನಾ ಪಡೆಯೊಂದಿಗೆ ಜಿಲ್ಲೆಯ ಕಂದಾಯ ಇಲಾಖೆ ಹಾಗೂ ಪೋಲಿಸ್ ಅಧಿಕಾರಿಗಳು ಇಂದು ಪ್ರವಾಹ ಪೀಡಿತ ಗ್ರಾಮಗಳಿಗೆ ತೆರಳಿ ಅಲ್ಲಿಯ ಪರಿಸ್ಥಿತಿ ಕುರಿತು ವೀಕ್ಷಣೆ ನಡೆಸಿದರು.

ಪ್ರವಾಹ ಪೀಡಿತ ಗ್ರಾಮವಾದ ಜಿಲ್ಲೆಯ ಶಹಪುರ ತಾಲ್ಲೂಕಿನ ಹುರಸಗುಂಡಗಿ, ರೋಜಾ ಗ್ರಾಮಗಳಿಗೆ ಭೇಟಿ ನೀಡಿದ ಆರ್ಮಿ ಪಡೆ, ಒಂದು ವೇಳೆ ಪ್ರವಾಹ ಹೆಚ್ಚಾದರೆ ಜನರ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಥಳಗಳ ಪರಿಶೀಲನೆ ನಡೆಸಿದರು. ತೆಲಂಗಾಣದ ಸಿಕಂದರಾಬಾದ್​ನಿಂದ ಆಗಮಿಸಿದ ಒಟ್ಟು ನಾಲ್ಕು ಜನ ಆರ್ಮಿ ಆಫೀಸರ್ ತಂಡದೊಂದಿಗೆ 64 ಜನರ ಸೇನಾ ಪಡೆ ಈಗಾಗಲೇ ತನ್ನ ಕಾರ್ಯ ಪ್ರಾರಂಭಿಸಿದೆ.

ನದಿ ಪಾತ್ರದಲ್ಲಿರುವ ಒಟ್ಟು 45 ಗ್ರಾಮಗಳ ಜನರಿಗೆ ಜಿಲ್ಲಾಡಳಿತದಿಂದ ಎಚ್ಚರಿಕೆ ಸೂಚನೆ ನೀಡಲಾಗಿದ್ದು, 14 ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಹ ಸನ್ನಿವೇಶ ಎದುರಿಸಲು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಭಾರತೀಯ ಭೂ ಸೇನಾ ತಂಡದೊಂದಿಗೆ ಮೂರು ಎನ್.ಡಿ.ಆರ್.ಎಫ್ ಟೀಮ್ ಕೂಡ ಜಿಲ್ಲೆಗೆ ಬಂದಿಳಿದಿವೆ ಅಂತ ಸಹಾಯಕ ಆಯುಕ್ತರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details