ಕರ್ನಾಟಕ

karnataka

ETV Bharat / state

ಭೀಮಾ ತೀರದಲ್ಲಿ ಪ್ರವಾಹ ಪರಿಸ್ಥಿತಿ... 100ಕ್ಕೂ ಹೆಚ್ಚು ಮನೆಗಳು ಮುಳಗಡೆ!

ಗ್ರಾಮವೇ ಸಂಪೂರ್ಣ ನೀರಿನಲ್ಲಿ ಮುಳಗಿದ್ದರಿಂದ ಸ್ಥಳೀಯ ಮೀನುಗಾರರ ತೆಪ್ಪದ ಸಹಾಯದಿಂದ ಮನೆಯಲ್ಲಿದ್ದ ಜನರರನ್ನು ಹಾಗೂ ಸಮಾನುಗಳನ್ನ ಹೊರತರಲು ಹರಸಾಹಸ ಪಡುವಂತಾಯಿತು.

flood
flood

By

Published : Oct 15, 2020, 6:42 PM IST

Updated : Oct 15, 2020, 7:04 PM IST

ಯಾದಗಿರಿ:ಭೀಮಾ ತೀರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಗಿದ್ದು, ಹಲವು ಗ್ರಾಮಗಳಿಗೆ ನುಗ್ಗಿದ ನೀರಿನಿಂದ ಜನ ಪರದಾಡುವಂತಾಯಿತು.

ಮಹಾ ಮಳೆಗೆ ಜನಜೀವನ ತತ್ತರಿಸಿ ಹೋಗಿದ್ದು ಮಳೆಯ ಅರ್ಭಟಕ್ಕೆ ಜಿಲ್ಲೆಯ ಜನ ಮನೆ ಮಠ ಕಳೆದುಕೊಂಡು ಬಿದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸನ್ನತಿ ಬ್ಯಾರೇಜ್​ನಿಂದ ಭೀಮಾ ನದಿಗೆ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹೊರ ಬಿಡಲಾಗಿದ್ದು ನದಿ ಅಪಾಯ ಪ್ರಮಾಣ ಮೀರಿ ಹರಿಯುವ ಮೂಲಕ ನದಿ ಪಾತ್ರದ ಗ್ರಾಮಗಳಲ್ಲಿ ಭಾರಿ ಅವಂತರ ಸೃಷ್ಟಿಸಿದೆ.

ಭೀಮಾ ತೀರದಲ್ಲಿ ಪ್ರವಾಹ

ನದಿಯಿಂದ 200 ಮೀಟರ್​ನಷ್ಟು ಅಂತರವಿರುವ ಜಿಲ್ಲೆಯ ಶಹಪುರ ತಾಲೂಕಿನ ಹುರಸಗುಂಡಗಿ ಗ್ರಾಮ ಸಂಪೂರ್ಣ ಜಲಾವೃತಗೊಳ್ಳುವ ಮೂಲಕ ಜನ ಅಕ್ಷರಶಃ ಸಂಕಷ್ಟಕ್ಕಿಡಾದರು. ಗ್ರಾಮಕ್ಕೆ ನುಗ್ಗಿದ ನೀರಿನಿಂದ ಮನೆಗಳಲ್ಲಿ ಸಂಗ್ರಹಿಸಿಟ್ಟ ಧವಸಧಾನ್ಯಗಳು ನೀರು ಪಾಲಾಗಿವೆ.

ಗ್ರಾಮವೇ ಸಂಪೂರ್ಣ ನೀರಿನಲ್ಲಿ ಮುಳಗಿದ್ದರಿಂದ ಸ್ಥಳೀಯ ಮೀನುಗಾರರ ತೆಪ್ಪದ ಸಹಾಯದಿಂದ ಮನೆಯಲ್ಲಿದ್ದ ಜನರರನ್ನು ಹಾಗೂ ಸಮಾನುಗಳನ್ನ ಹೊರತರಲು ಹರಸಾಹಸ ಪಡುವಂತಾಯಿತು. ಗ್ರಾಮದ 100ಕ್ಕೂ ಹೆಚ್ಚು ಮನೆಗಳು ಮುಳಗುವ ಮೂಲಕ ಭೀಮಾ ನದಿ ತೀರದಲ್ಲೀಗ ಪ್ರವಾಹ ಸೃಷ್ಟಿಯಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಶಹಪುರ ತಹಶಿಲ್ದಾರ ಜಗನಾಥ ರೆಡ್ಡಿ ಹಾಗೂ ಅಧಿಕಾರಿಗಳ ತಂಡದಿಂದ ನಿರಾಶ್ರಿತರಿಗೆ ಗ್ರಾಮದ ಹೊರಭಾಗದಲ್ಲಿನ ಸಮುದಾಯ ಭವನದಲ್ಲಿ ಆಶ್ರಯ ನೀಡುವ ವ್ಯವಸ್ಥೆ ಮಾಡಲಾಗಿದೆ.

Last Updated : Oct 15, 2020, 7:04 PM IST

ABOUT THE AUTHOR

...view details