ಕರ್ನಾಟಕ

karnataka

ETV Bharat / state

ವಿದ್ಯುತ್​​​ ತಂತಿ ತಗುಲಿ ನಡು ರಸ್ತೆಯಲ್ಲಿ ಧಗಧಗಿಸಿದ ಟ್ರ್ಯಾಕ್ಟರ್​​​​ - ನಡು ರಸ್ತೆಯಲ್ಲಿ ಧಗಧಗಿಸಿದ ಟ್ರಾಕ್ಟರ್​​​

ದೇವದುರ್ಗ ಇಂದಿರಾ ನಗರದ ರೈತ ಚೆನ್ನಪ್ಪ ದೊರೆ ಎಂಬಾತನ ಟ್ರಾಕ್ಟರ್​​ಗೆ ಬೆಂಕಿ ತಗುಲಿದೆ. ಕೊಳ್ಳೂರಿನಲ್ಲಿಯ ಅವರ ಸಂಬಂಧಿಯ ಜಮೀನಿನಲ್ಲಿನ ಭತ್ತದ ಹುಲ್ಲು ಪಡೆದು ಸಾಗುಸುತ್ತಿದ್ದ ವೇಳೆ ಘಟನೆ ಜರುಗಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಬರುವಷ್ಟರಲ್ಲಿ ಹುಲ್ಲು ಹಾಗೂ ಟ್ರಾಕ್ಟರ್ ಟ್ರಾಲಿ ಸುಟ್ಟು ಕರಕಲಾಗಿದೆ.

ಧಗಧಗಿಸಿದ ಟ್ರಾಕ್ಟರ್​​​
ಧಗಧಗಿಸಿದ ಟ್ರಾಕ್ಟರ್​​​

By

Published : Apr 27, 2020, 11:13 AM IST

ಸುರಪುರ: ಮೇವು ತುಂಬಿದ್ದ ಟ್ರ್ಯಾಕ್ಟರ್​ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಬೆಂಕಿ ತಗುಲಿ ಟ್ರಾಲಿಯ ಸಮೇತ ಮೇವು ಸುಟ್ಟು ಭಸ್ಮವಾದ ಘಟನೆ ಕೊಳ್ಳೂರ ಗ್ರಾಮದ ಬಳಿ ನಡೆದಿದೆ.

ದೇವದುರ್ಗ ಇಂದಿರಾ ನಗರದ ರೈತ ಚೆನ್ನಪ್ಪ ದೊರೆ ಎಂಬಾತನ ಟ್ರ್ಯಾಕ್ಟರ್​ಗೆ ಬೆಂಕಿ ತಗುಲಿದೆ. ಕೊಳ್ಳೂರಿನಲ್ಲಿಯ ಅವರ ಸಂಬಂಧಿಯ ಜಮೀನಿನಲ್ಲಿನ ಭತ್ತದ ಹುಲ್ಲು ಪಡೆದು ಸಾಗುಸುತ್ತಿದ್ದ ವೇಳೆ ಘಟನೆ ಜರುಗಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಬರುವಷ್ಟರಲ್ಲಿ ಹುಲ್ಲು ಹಾಗೂ ಟ್ರಾಕ್ಟರ್ ಟ್ರಾಲಿ ಸುಟ್ಟು ಕರಕಲಾಗಿದೆ.

ನಡು ರಸ್ತೆಯಲ್ಲಿ ಧಗಧಗಿಸಿದ ಟ್ರಾಕ್ಟರ್​​​

ಜೆಸ್ಕಾಂ ನಿರ್ಲಕ್ಷ್ಯದಿಂದ ತಂತಿ ಜೋತು ಬಿದ್ದ ಕಾರಣ ಈ ಘಟನೆ ನಡೆದಿದ್ದು, ಈ ಕುರಿತು ಗ್ರಾಮದ ರೈತರು ಹಲವು ಬಾರಿ ವಿದ್ಯುತ್ ಇಲಾಖೆಯ ಗಮನಕ್ಕೆ ತಂದರು ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ ಇವರ ನಿರ್ಲ್ಯಕ್ಷದಿಂದ ಇಂದು ರೈತನಿಗೆ ದೊಡ್ಡ ನಷ್ಟವುಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಟ್ರಾಕ್ಟರ್ ಟ್ರಾಲಿ ಮತ್ತು ಹುಲ್ಲು ಕಳೆದುಕೊಂಡು ರೈತ ಚಿಂತೆಗೀಡಾಗಿದ್ದು ಪರಿಹಾರ ನೀಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details