ಯಾದಗಿರಿ: ಬೋರ್ವೆಲ್ ನೀರಿಗಾಗಿ ಕ್ವಾರಂಟೈನ್ ಕೇಂದ್ರವೊಂದರಲ್ಲಿ ಮಹಿಳೆಯರ ನಡುವೆ ಮಾರಾಮಾರಿ ನಡೆದಿರುವ ಘಟನೆ ಕಂಡುಬಂದಿದೆ.
ಬೋರ್ವೆಲ್ ನೀರಿಗಾಗಿ ಕ್ವಾರಂಟೈನ್ ಕೇಂದ್ರದಲ್ಲಿ ಜಡೆ ಜಗಳ: ವಿಡಿಯೋ ವೈರಲ್ - ಯಾದಗಿರಿ ಕ್ವಾರಂಟೈನ್ ಕೇಂದ್ರದ ಜಗಳ ನ್ಯೂಸ್
ಯಾದಗಿರಿ ನಗರದ ಡಿಡಿಯು ಶಾಲೆಯ ಕ್ವಾರಂಟೈನ್ ಕೇಂದ್ರದ ಆವರಣದಲ್ಲಿ ನೂರಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದ್ದು, ಬೋರ್ವೆಲ್ ನೀರಿಗಾಗಿ ಇಬ್ಬರು ಮಹಿಳೆಯರ ನಡುವೆ ಗಲಾಟೆಯಾಗಿದೆ.
ಯಾದಗಿರಿ ನಗರದ ಡಿಡಿಯು ಶಾಲೆಯ ಕ್ವಾರಂಟೈನ್ ಕೇಂದ್ರದ ಆವರಣದಲ್ಲಿ ಈ ಜಗಳ ನಡೆದಿದೆ. ಮಹಾರಾಷ್ಟ್ರದಿಂದ ಆಗಮಿಸಿದ ನೂರಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಈ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್ ಕೇಂದ್ರದ ಆವರಣದಲ್ಲಿನ ಬೋರ್ವೆಲ್ ಹತ್ತಿರ ಇಂದು ಬಟ್ಟೆ ತೊಳೆಯಲು ಹೋದಂತಹ ಕೆಲ ಮಹಿಳೆಯರು ಹಾಗೂ ಪುರುಷರು ನೀರಿಗಾಗಿ ದೊಡೆದಾಡಿಕೊಂಡಿದ್ದಾರೆ. ಮೊದಲು ಮಹಿಳೆಯರಿಬ್ಬರಿಂದ ಜಗಳ ಶುರುವಾಗಿದ್ದು, ನಂತರ ಓರ್ವ ವ್ಯಕ್ತಿ ಮಧ್ಯೆ ಪ್ರವೇಶಿಸಿದ್ದಾನೆ. ಈತ ಮಹಿಳೆಯೊಬ್ಬಳ ಮೇಲೆ ಹಲ್ಲೆ ಮಾಡಿದ್ದಾನೆ.
ಕ್ವಾರಂಟೈನ್ ಕೇಂದ್ರದಲ್ಲಾದ ಈ ಗಲಾಟೆಯನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಜಿಲ್ಲೆಯ ಹಲವು ಕ್ವಾರಂಟೈನ್ ಕೇಂದ್ರಗಳಲ್ಲಿ ಒಂದಲ್ಲಾ ಒಂದು ಘಟನೆಗಳು ಜರುಗುತ್ತಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.