ಕರ್ನಾಟಕ

karnataka

ETV Bharat / state

ಬಿಸಿ ಊಟ ಸರಿಯಿಲ್ಲ ಎಂದು ಅಡುಗೆ ಸಿಬ್ಬಂದಿ ಮೇಲೆ ಎಸ್​ಡಿಎಂಸಿ ಅಧ್ಯಕ್ಷನಿಂದ ಹಲ್ಲೆ - ಕಲಬುರಗಿ ಜಿಲ್ಲಾ ಆಸ್ಪತ್ರೆ

ಎಸ್​ಡಿಎಂಸಿ ಅಧ್ಯಕ್ಷರೊಬ್ಬರು ಅಡುಗೆ ಸಿಬ್ಬಂದಿಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಹಾಪುರ ತಾಲೂಕಿನ ಗುಂಡಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ಮಾರಾಣಾಂತಿಕ ಹಲ್ಲೆ

By

Published : Aug 26, 2019, 3:35 AM IST

ಯಾದಗಿರಿ: ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್​ಡಿಎಂಸಿ ಅಧ್ಯಕ್ಷರೊಬ್ಬರು ಅಡುಗೆ ಸಿಬ್ಬಂದಿಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಜಿಲ್ಲೆಯ ಶಹಾಪುರ ತಾಲೂಕಿನ ಗುಂಡಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್​ಡಿಎಂಸಿ ಅಧ್ಯಕ್ಷ ಭೀಮಣ್ಣ ಎಂಬುವವರು ಅಡುಗೆ ಸಿಬ್ಬಂದಿ ಕಮಲಬಾಯಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

ಮಧ್ಯಾಹ್ನದ ಸಮಯದಲ್ಲಿ ಬಿಸಿಯೂಟ ಸರಿಯಾಗಿ ಮಾಡಿಲ್ಲ ಎಂದು ಅಡುಗೆ ಸಿಬ್ಬಂದಿ ಕಮಲಬಾಯಿ ಜೊತೆ ಭೀಮಣ್ಣ ಜಗಳವಾಡಿದ್ದಾರೆ. ಬಳಿಕ ಇದೇ ವಿಚಾರವಾಗಿ ಭೀಮಣ್ಣ ಗುಂಪು ಕಟ್ಟಿಕೊಂಡು ಬಂದು ರಾತ್ರಿ ಸಮಯದಲ್ಲಿ ಕಮಲಾಬಾಯಿ ಮನೆ ಮೇಲೆ ದಾಳಿ ಮಾಡಿದ್ದಲ್ಲದೇ, ಅವರ ಮೇಲೆ ಮಾರಣಾಂತಿಕ ಹಲ್ಲೆಗೈಯ್ದಿದ್ದಾರೆಂದು ದೂರಲಾಗಿದೆ..

ಹಲ್ಲೆಗೊಳಗಾದ ಅಡುಗೆ ಸಿಬ್ಬಂದಿ ಕಮಲಬಾಯಿ ಪತಿ ಹಾಗೂ ಕುಟುಂಬಸ್ಥರನ್ನು ಚಿಕಿತ್ಸೆಗೆಂದು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details