ಕರ್ನಾಟಕ

karnataka

ETV Bharat / state

ಸಾಲಮನ್ನಾ ಹಣ ರೈತರ ಖಾತೆಗೆ ಜಮಾ ಮಾಡದಿರುವುದಕ್ಕೆ ಬ್ಯಾಂಕ್​​ ವಿರುದ್ಧ ರೈತರ ಹೋರಾಟ.. - undefined

ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ರೈತರು ಸಾಲ ಮನ್ನಾ ಮಾಡಿದ ಹಣವನ್ನು ರೈತರ ಉಳಿತಾಯದ ಖಾತೆಗೆ ಜಮಾ ಮಾಡದೆ ಸಾಲದ ಖಾತೆಗೆ ಜಮಾ ಮಾಡಿ ಬ್ಯಾಂಕ್‌ ಸಿಬ್ಬಂದಿ ರೈತರಿಗೆ ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕ್​​ ವಿರುದ್ಧ ರೈತರ ಹೋರಾಟ

By

Published : Jul 2, 2019, 9:59 AM IST

ಯಾದಗಿರಿ : ಸರ್ಕಾರ ರೈತರಿಗೆ ಬಿಡುಗಡೆ ಮಾಡಿದ ಸಾಲ ಮನ್ನಾ ಹಣವನ್ನು, ಬ್ಯಾಂಕ ಸಿಬ್ಬಂದಿ ರೈತರ ಖಾತೆಗೆ ಜಮಾ ಮಾಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ರೈತರು, ಸಾಲ ಮನ್ನಾ ಮಾಡಿದ ಹಣವನ್ನು ರೈತರ ಉಳಿತಾಯದ ಖಾತೆಗೆ ಜಮಾ ಮಾಡದೆ ಸಾಲದ ಖಾತೆಗೆ ಜಮಾ ಮಾಡಿ ಬ್ಯಾಂಕ ಸಿಬ್ಬಂದಿ ರೈತರಿಗೆ ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕ್​​ ವಿರುದ್ಧ ರೈತರ ಹೋರಾಟ

ಅನ್ನದಾತನ ಸಮಸ್ಯೆಯನ್ನು ಅರಿತ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ರೈತರ ಸಾಲ ಮನ್ನಾಕ್ಕಾಗಿ ಕೋಟಿ ಕೋಟಿ ಅನುದಾನವನ್ನು ಬ್ಯಾಂಕಗಳಿಗೆ ಬಿಡುಗಡೆ ಮಾಡಿದೆ. ಆದರೆ, ಸರ್ಕಾರ ಅನುದಾನ ಬಿಡುಗಡೆ ಮಾಡಿ ರೈತರ ಖಾತೆಗೆ ಜಮಾ ಮಾಡಿ ಎಂದು ಹೇಳಿದರೆ, ಬ್ಯಾಂಕ್ ಸಿಬ್ಬಂದಿ ರೈತರ ಖಾತೆಗೆ ಜಮಾ ಮಾಡದೆ ಸಾಲದ ಖಾತೆಗೆ ಜಮಾ ಮಾಡಿ ಮತ್ತೆ ರೈತರಿಗೆ ಸಾಲದ ಸುಳಿಯಲ್ಲಿ ಮುಳುಗಿಸುತ್ತಿದೆ ಎಂದು ಕಿಡಿಕಾರಿದರು.

ಕೃಷ್ಣ ಪ್ರಗತಿ ಬ್ಯಾಂಕ್ ಸಿಬ್ಬಂದಿ ಸಾರ್ವಜನಿಕ ಸ್ವತ್ತಾದ ಬ್ಯಾಂಕ್‌ನ ತಮ್ಮ ಮನೆಯ ಬ್ಯಾಂಕ್ ಎನ್ನುವ ರೀತಿಯಲ್ಲಿ ಸರ್ವಾಧಿಕಾರ ನಡೆಸುತ್ತಿದ್ದಾರೆ. ಸರ್ಕಾರ ಸಾಲ ಮನ್ನಾ ಮಾಡಿ ಅಂತಾ ಹೇಳಿ ಅನುದಾನ ಬಿಡುಗಡೆ ಮಾಡಿದ್ರೇ, ದೇವರು ವರ ಕೊಟ್ರೂ ಪೂಜಾರಿ ವರ ಕೊಡಲಿಲ್ಲ ಎನ್ನುವ ಹಾಗೇ ಬ್ಯಾಂಕ್ ಸಿಬ್ಬಂದಿ ರೈತರ ಸಾಲ ಮನ್ನಾ ಮಾಡದೆ ರೈತರಿಗೆ ಪರೋಕ್ಷವಾಗಿ ಮೋಸ ಮಾಡುತ್ತಿದ್ದಾರೆ ಎಂದು ಗುಡುಗಿದರು.

For All Latest Updates

TAGGED:

ABOUT THE AUTHOR

...view details