ಕರ್ನಾಟಕ

karnataka

By

Published : Jul 25, 2019, 3:08 PM IST

ETV Bharat / state

ಭೀಕರ ಬರಗಾಲ... ಯಾದಗಿರಿಯಲ್ಲಿ ಸಕಾಲಕ್ಕೆ ಮಳೆ ಬಾರದೇ ರೈತರು ಕಂಗಾಲು

ಸಕಾಲಕ್ಕೆ ಮಳೆ ಬಾರದ ಶಹಾಪುರ ತಾಲೂಕಿನ ಗುಂಡಳ್ಳಿ ತಾಂಡಾದ ರೈತರು ಜಮೀನಿನಲ್ಲಿ ಬೀಜ ಬಿತ್ತಿದ್ರೂ ಮೊಳಕೆಯೊಡೆಯುತ್ತಿಲ್ಲ. ನಾವು ಎಷ್ಟೇ ಕಷ್ಟ ಪಟ್ಟರೂ ಕೂಡ ಬೀಜ ನಾಟಿಯಾಗುತ್ತಿಲ್ಲ ಎಂದು ರೈತರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಭೀಕರ ಬರಗಾಲ..ಯಾದಗಿರಿಯಲ್ಲಿ ಸಕಾಲಕ್ಕೆ ಮಳೆ ಬಾರದೇ ರೈತ ಕಂಗಾಲು

ಯಾದಗಿರಿ: ಸಕಾಲಕ್ಕೆ ಮಳೆ ಬಾರದ ಹಿನ್ನೆಲೆ ಜಿಲ್ಲೆಯ ಶಹಾಪುರ ತಾಲೂಕಿನ ಗುಂಡಳ್ಳಿ ತಾಂಡಾದ ರೈತರು ಜಮೀನಿನಲ್ಲಿ ಬೀಜ ಬಿತ್ತಿದ್ರೂ ಮೊಳಕೆಯೊಡುತ್ತಿಲ್ಲ. ನಾವು ಎಷ್ಟೇ ಕಷ್ಟ ಪಟ್ಟರೂ ಬೆಳೆ ಬೆಳೆಯುತ್ತಿಲ್ಲ ಎಂದು ರೈತರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಭೀಕರ ಬರಗಾಲ..ಯಾದಗಿರಿಯಲ್ಲಿ ಸಕಾಲಕ್ಕೆ ಮಳೆ ಬಾರದೇ ರೈತ ಕಂಗಾಲು

ಜಿಲ್ಲೆಯಲ್ಲಿ ಸತತ ನಾಲ್ಕು ವರ್ಷಗಳಿಂದ ಭೀಕರ ಬರಗಾಲ ಆವರಿಸಿದೆ. ಈ ಬಾರಿಯಾದ್ರೂ ಬಿತ್ತನೆಗೆ ಮಾಡುವಷ್ಟು ಭೂಮಿ ಹದಗೊಂಡಿಲ್ಲ, ಬಿತ್ತಿದ ಬೀಜಗಳುಭೂಮಿಯಿಂದ ಮೊಳಕೆಯುತ್ತಿಲ್ಲ. ಮುಂಗಾರು ಅವಧಿಯಿದ್ದ ಪರಿಣಾಮ, ಮಳೆ ಬಂದ್ರೆ ಚೆನ್ನಾಗಿರುತ್ತಿತ್ತು. ಆದ್ರೆ ಮಳೆ ಬಾರದ ಹಿನ್ನಲೆ, ಜಮೀನಿನಲ್ಲಿ ಹತ್ತಿ, ಹೆಸರು ಬೀಜ ಬಿತ್ತಿದ್ದು, ಬೆಳೆ ಬೆಳೆಯುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಇನ್ನು, ಊರಲ್ಲಿ ದನಕರುಗಳಿಗೆ ಕುಡಿಯಲು ನೀರು ಹಾಗೂ ಮೇವು ಇಲ್ಲ. ಹೀಗಾಗಿ ಜಿಲ್ಲಾಡಳಿತ ಮೇವು ಬ್ಯಾಂಕ್​ಗಳನ್ನು ಸ್ಥಾಪನೆ ಮಾಡಬೇಕು. ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಬೇಕು ಎಂದು ರೈತರು ಮನವಿ ಮಾಡುತ್ತಿದ್ದಾರೆ .

For All Latest Updates

TAGGED:

ABOUT THE AUTHOR

...view details