ವಿಜಯಪುರ: ಪಶು ಆಸ್ಪತ್ರೆ ಎದುರು ರೈತನ ಶವ ಪತ್ತೆಯಾದ ಘಟನೆ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ನಡೆದಿದೆ.
ಪಶು ಆಸ್ಪತ್ರೆ ಎದುರು ರೈತನ ಶವ ಪತ್ತೆ, ಆತ್ಮಹತ್ಯೆ ಶಂಕೆ - undefined
ಪಶು ಆಸ್ಪತ್ರೆ ಎದುರು ಹನುಮಂತ ಎಂಬ ರೈತನ ಶವವಾಗಿ ಪತ್ತೆಯಾದ್ದು,ಘಟನಾ ಸ್ಥಳದಲ್ಲಿ ಕೆಮಿಕಲ್ ಬಾಟಲಿ ಸಿಕ್ಕಿದೆ.
ರೈತ ಆತ್ಮಹತ್ಯೆ
ರೈತನನ್ನು ಗೋರನಾಳ ಗ್ರಾಮದ ಹನುಮಂತ ಚಿಂಚೋಳ್ಳಿ ಎಂದು ಗುರುತಿಸಲಾಗಿದೆ.
ಹನುಮಂತ ಚಿಂಚೋಳ್ಳಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.