ಯಾದಗಿರಿ: ಸಾಲಬಾದೆ ತಾಳದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ನಡೆದಿದೆ.
ಸಾಲಬಾದೆ ತಾಳದೆ ರೈತ ಆತ್ಮಹತ್ಯೆ
ಸಾಲಬಾದೆ ತಾಳದೆ ರೈತ ಖಾಸಿಂಸಾಬ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಖಾಸಿಂಸಾಬ್ (52) ಆತ್ಮಹತ್ಯೆ ಮಾಡಿಕೊಂಡ ರೈತ. ಕಳೆದ ಎರಡು ವರ್ಷಗಳಿಂದ ಅವರು 6 ಎಕರೆ ಜಮೀನಿನಲ್ಲಿ ಸಾಲಸೂಲ ಮಾಡಿ ಬಿತ್ತನೆ ಮಾಡಿದ್ದರು. ಆದ್ರೆ ಸರಿಯಾದ ಸಮಯಕ್ಕೆ ಮಳೆ ಬಾರದೆ ನಷ್ಟ ಅನುಭವಿಸಿದ್ದರು ಎನ್ನಲಾಗುತ್ತಿದೆ.
ಬ್ಯಾಂಕ್, ಕೈ ಸಾಲ ಸೇರಿದಂತೆ ಖಾಸಿಂಸಾಬ್ 7 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಮಾಡಿದ ಸಾಲ ತಿರಿಸಲಾಗಾದೆ ರೈತ ಖಾಸಿಂಸಾಬ್ ಮನನೊಂದು ನಿನ್ನೆ ಮನೆಯಲ್ಲಿ ವಿಷ ಸೇವಿಸಿದ್ದರು. ವಿಷ ಸೇವಿಸಿದ್ದ ಖಾಸಿಂಸಾಬ್ರನ್ನ ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ರೈತ ಖಾಸಿಂಸಾಬ್ ಸಾವನ್ನಪ್ಪಿದ್ದಾರೆ. ಈ ಕುರಿತು ವಡಗೇರಾ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.