ಯಾದಗಿರಿ: ಪ್ರೇಮಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶರಣಬಸವ (23), ಶೇಖಮ್ಮ (19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳೆಂದು ತಿಳಿದು ಬಂದಿದೆ. ಬೆಂಗಳೂರಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಶರಣಬಸವ ಸಂಕ್ರಾಂತಿ ಹಬ್ಬಕ್ಕೆಂದು ಹುಟ್ಟೂರಿಗೆ ಆಗಮಿಸಿದ್ದ.
ಶೇಖಮ್ಮ ಗ್ರಾಮದಲ್ಲೇ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಳು. ಇಬ್ಬರು 2 ವರ್ಷದಿಂದ ಪ್ರೀತಿಸುತ್ತಿದ್ದರು. ಈ ವಿಷಯ ತಿಳಿದ ಹುಡುಗನ ತಂದೆ ಇದೆಲ್ಲಾ ಸರಿಯಲ್ಲ, ಜೀವನದ ಕಡೆ ಗಮನ ಕೊಡು ಎಂದು ಬುದ್ಧಿವಾದ ಹೇಳಿದ್ದರು.
ವಿವಾಹಕ್ಕೆ ಕುಟುಂಬಸ್ಥರ ವಿರೋಧ ಮನನೊಂದು ಪ್ರೇಮಿಗಳ ಆತ್ಮಹತ್ಯೆ ಈ ವೇಳೆ ಬೆಂಗಳೂರಿಂದ ಆಗಮಿಸಿದ್ದ ಶರಣಬಸವ ಶೇಖರಮ್ಮನನ್ನು ಭೇಟಿಯಾಗಲು ಮುಂದಾಗಿದ್ದ, ನಿನ್ನೆ ರಾತ್ರಿ ಇಬ್ಬರೂ ಗ್ರಾಮದ ತನ್ನ ದೊಡ್ಡಪ್ಪನ ಮನೆಯಲ್ಲಿ ಭೇಟಿಯಾಗಲು ನಿಶ್ಚಯಿಸಿದ್ದರು. ಇಬ್ಬರ ವಿವಾಹಕ್ಕೆ ಮೊದಲಿನಿಂದಲೂ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಇಬ್ಬರು ಭೇಟಿಯಾದ ವೇಳೆ ವಿವಾಹ ಕುರಿತು ಕುಟುಂಬಸ್ಥರಿಂದ ವಿರೋಧವಿರುವುದಕ್ಕೆ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕ್ಲಬ್ ಡ್ಯಾನ್ಸರ್ ಜೊತೆ ಬಿಜೆಪಿ ಕಾರ್ಯಕರ್ತರ ಮಸ್ತ್-ಮಸ್ತ್ ಡ್ಯಾನ್ಸ್.. ವಿಡಿಯೋ ವೈರಲ್