ಯಾದಗಿರಿ: ಕೆಎಸ್ಆರ್ಟಿಸಿ ಬಸ್ನಲ್ಲಿ ನಡೆದ ಎಣ್ಣೆ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಸ್ ಚಾಲಕರಿಬ್ಬರು ಸೇರಿದಂತೆ ಓರ್ವ ನಿರ್ವಾಹಕನನ್ನ ಅಮಾನತು ಮಾಡಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀಹರಿ ಬಾಬು ಅವರು ಆದೇಶ ಹೊರಡಿಸಿದ್ದಾರೆ.
ಈಟಿವಿ ಭಾರತ ಫಲಶೃತಿ: ಬಸ್ನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಪ್ರಕರಣ, ಮೂವರು ಅಮಾನತು - ಕೆಎಸ್ಆರ್ಟಿಸಿ ಬಸ್ನಲ್ಲಿ ನಡೆದ ಎಣ್ಣೆ ಪಾರ್ಟಿ
ಜುಲೈ 27 ರಂದು ಈ ಘಟನೆ ನಡೆದಿದ್ದು, ಬೆಂಗಳೂರಿನಿಂದ ಯಾದಗಿರಿಗೆ ಪ್ರಯಾಣಿಸುತ್ತಿದ್ದ ಈ ಬಸ್ನ ಚಾಲಕರಿಬ್ಬರು ಸೇರಿದಂತೆ ನಿರ್ವಾಹಕನ ಸಮ್ಮುಖದಲ್ಲೆ ಪ್ರಯಾಣಿಕರಿಬ್ಬರು ಎಣ್ಣೆ ಪಾರ್ಟಿ ಮಾಡಿದ್ದರು.
ಯಾದಗಿರಿ ಡಿಪೋ ಬಸ್ ನಂ KA 33 F 0447 ನಲ್ಲಿ ಜುಲೈ 27 ರಂದು ಈ ಘಟನೆ ನಡೆದಿದ್ದು, ಬೆಂಗಳೂರಿನಿಂದ ಯಾದಗಿರಿಗೆ ಪ್ರಯಾಣಿಸುತ್ತಿದ್ದ ಈ ಬಸ್ನ ಚಾಲಕರಿಬ್ಬರು ಸೇರಿದಂತೆ ನಿರ್ವಾಹಕನ ಸಮ್ಮುಖದಲ್ಲೆ ಪ್ರಯಾಣಿಕರಿಬ್ಬರು ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದರು. ಇದರಿಂದಾಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಭಯದಿಂದಲೇ ಪ್ರಯಾಣ ಮಾಡಿದ್ದರು.
ಈ ಕುರಿತು ಈಟಿವಿ ಭಾರತ ಎಣ್ಣೆ ಬೇಕು ಅಣ್ಣ... ಕೆಎಸ್ಆರ್ಟಿಸಿ ಬಸ್ನಲ್ಲೇ ಪ್ರಯಾಣಿಕರು ಮದ್ಯಪಾನ ಮಾಡಿದ್ರಣ್ಣ!ಎಂಬ ಶೀರ್ಷಿಕೆ ಯಡಿಯಲ್ಲಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಈಟಿವಿ ಭಾರತ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು, ಬಸ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕರಾದ ಶರಣಪ್ಪ, ಜೆಟೆಪ್ಪ,ಹಾಗೂ ಓರ್ವ ನಿರ್ವಾಹಕ ವಿಜಯಕುಮಾರ ಎಂಬುವವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.