ಸುರಪುರ :ನಗರದ ರಂಗಂಪೇಟೆಯಲ್ಲಿ ನಡೆಯುತ್ತಿದ್ದ ಸಂತೆಯ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸ್ ಸಿಬ್ಬಂದಿ ಸಂತೆಯನ್ನು ಬಂದ್ ಮಾಡಿಸುವ ಮೂಲಕ ಎಲ್ಲರನ್ನೂ ವಾಪಸ್ ಕಳುಹಿಸಿದ ಘಟನೆ ನಡೆದಿದೆ.
ವರದಿ ಪ್ರಸಾರವಾದ 20 ನಿಮಿಷಕ್ಕೇ ಸಂತೆ ತೆರವುಗೊಳಿಸಿದ ಅಧಿಕಾರಿಗಳು.. ಇದು ಈಟಿವಿ ಇಂಪ್ಯಾಕ್ಟ್!! - surapur news
ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳ ಕಣ್ಣು ತೆರೆಸಿದ ಈಟಿವಿ ಭಾರತ ಪ್ರಸಾರ ಮಾಡಿದ್ದ ವರದಿ.
ಈ ಟಿವಿ ಇಂಪ್ಯಾಕ್ಟ್
ಸಂತೆ ನಡೆಯುತ್ತಿರುವುದಕ್ಕೆ ಸಂಬಂಧಿಸಿದಂತೆಈಟಿವಿ ಭಾರತ'ಲಾಕ್‌ಡೌನ್ ನಿಯಮ ಗಾಳಿಗೆ ತೂರಿದ ಸುರಪುರ ನಗರಸಭೆ ಅಧಿಕಾರಿಗಳು, ಜನರು' ಎಂಬ ಶೀರ್ಷಿಕೆಯಡಿ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರವಾದ 20 ನಿಮಿಷಕ್ಕೆ ಕಾರ್ಯಾಚರಣೆಗಿಳಿದ ಪೊಲೀಸರು ಮತ್ತು ನಗರಸಭೆ ಸಿಬ್ಬಂದಿ ಸಂತೆಯನ್ನು ಬಂದ್ ಮಾಡಿಸಿದ್ದಾರೆ.
ಇದನ್ನು ಓದಿ :ಲಾಕ್‌ಡೌನ್ ನಿಯಮ ಗಾಳಿಗೆ ತೂರಿದ ಸುರಪುರ ನಗರಸಭೆ ಅಧಿಕಾರಿಗಳು, ಜನರು