ಯಾದಗಿರಿ:ಬೆಂಗಳೂರಿನಲ್ಲಿ ನಡೆದಂತಹ ಬಿಜೆಪಿಯ ಅತೃಪ್ತರ ಶಾಸಕರ ಸಭೆಯ ಹೈಡ್ರಾಮಾ ಕುರಿತು ಯಾದಗಿರಿಯಲ್ಲಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಕುರಿತು ನಮ್ಮ ಹೈ ಕಮಾಂಡ್ ಗಮನಿಸುತ್ತಿದೆ ಇದರ ಬಗ್ಗೆ ನಮ್ಮ ಹೈ ಕಮಾಂಡ್ ಇಂದು ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು.
ಕೆಪಿಸಿಸಿ ನೂತನ ಅಧ್ಯಕ್ಷ ಪದಗ್ರಹಣ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಲು ಯಾದಗಿರಿಗೆ ಆಗಮಿಸಿದಂತಹ ವೇಳೆ ಪ್ರತಿಕ್ರಿಯೆ ನೀಡಿದ ಅವರು ಒಂದು ವೇಳೆ ಸರ್ಕಾರ ತನ್ನ ವೈಫಲ್ಯದಿಂದ ಪತನವಾದರೆ, ರಾಜ್ಯದ ಜನರ ಹಿತದೃಷ್ಟಿಯಿಂದ ನಮ್ಮ ಹೈ ಕಮಾಂಡ್ ಮುಂದಿನ ನಿರ್ಣಯವನ್ನ ಕೈಗೊಳ್ಳುತ್ತೆ ಅಂತ ಹೇಳಿಕೆ ನೀಡುವ ಮೂಲಕ ಬಿಜೆಪಿಯ ಭಿನ್ನಮತ ಸ್ಫೋಟದಿಂದ ಅಧಿಕಾರ ಕಳೆದುಕೊಂಡರೆ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆಗೆ ಮುಂದಾಗಲಿದೆ ಎಂದು ತಿಳಿಸಿದ್ದಾರೆ.