ಕರ್ನಾಟಕ

karnataka

ETV Bharat / state

ಎನ್​ಕೌಂಟರ್ ಮೂಲಕ ಕಾಮುಕರ ಸಂಹಾರ: ಶಹಾಪುರದಲ್ಲಿ ವಿದ್ಯಾರ್ಥಿನಿಯರ ವಿಜಯೋತ್ಸವ

ಹೈದ್ರಾಬಾದ್​ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್ ಮಾಡಿರುವುದಕ್ಕೆ ಶಹಾಪುರ ಪಟ್ಟಣದಲ್ಲಿ ವಿದ್ಯಾರ್ಥಿನಿಯರು ವಿಜಯೋತ್ಸವ ಆಚರಿಸಿದರು.

By

Published : Dec 6, 2019, 10:41 PM IST

Encounter of rapist : celebration by students in Shahapur town
ಅತ್ಯಾಚಾರ ಪ್ರಕರಣದ ಎನ್​ಕೌಂಟರ್ : ಶಹಾಪುರ ಪಟ್ಟಣದಲ್ಲಿ ವಿದ್ಯಾರ್ಥಿಗಳಿಂದ ವಿಜಯೋತ್ಸವ

ಯಾದಗಿರಿ:ಹೈದರಾಬಾದ್​ನಲ್ಲಿ ನಡೆದಿದ್ದ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್ ಮಾಡಿರುವುದಕ್ಕೆ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ವಿದ್ಯಾರ್ಥಿಗಳಿಂದ ವಿಜಯೋತ್ಸವ ಆಚರಿಸಲಾಯಿತು.

ಅತ್ಯಾಚಾರಿಗಳ ಸಂಹಾರ: ಶಹಾಪುರದಲ್ಲಿ ವಿದ್ಯಾರ್ಥಿನಿಯರಿಂದ ವಿಜಯೋತ್ಸವ

ನಗರದ ಬಸವೇಶ್ವರ ವೃತ್ತದಲ್ಲಿ ಶಾಲಾ ವಿದ್ಯಾರ್ಥಿನಿಯರು ಮತ್ತು ನಾಗರಿಕ ವೇದಿಕೆ ವತಿಯಿಂದ ಸಿಹಿ ಹಂಚಿ ಸಂಭ್ರಮ ಆಚರಿಸಲಾಯಿತು. ಅತ್ಯಾಚಾರಿಗಳಿಗೆ ಪೊಲೀಸರು ಎನ್​ಕೌಂಟರ್ ಮಾಡುವ ಮೂಲಕ ತಕ್ಕ ಶಿಕ್ಷೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ಮುಂದೆ ಸರ್ಕಾರ ಎಚ್ಚೆತ್ತುಕೊಂಡು ಮಹಿಳೆಯರ ಮೇಲಾಗುವ ದೌರ್ಜನ್ಯ, ಅತ್ಯಾಚಾರವನ್ನು ತಡೆಗಟ್ಟಲು ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ರು.

ABOUT THE AUTHOR

...view details