ಕರ್ನಾಟಕ

karnataka

ETV Bharat / state

ಯಾದಗಿರಿಯಲ್ಲಿ ಸಂಭ್ರಮದ ಈದ್ ಮಿಲಾದ್: ಭಾಯಿ ಭಾಯಿ ಅಂದ್ರು ಹಿಂದೂ ಮುಸ್ಲಿಮರು - ಯಾದಗಿರಿ ನಗರದ ಮೈಲಾಪುರ ಬೇಸ್ ಬಳಿ ಈದ್ ಮಿಲಾದ್ ಕಾರ್ಯಕ್ರಮ

ಯಾದಗಿರಿ ನಗರದಲ್ಲಿ ಈದ್ ಮಿಲಾದ್​ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. 'ಸಂಜಿಮುಲ್ ಮುಸ್ಲಿಂ ಮಿನ್ ಬೈತುಲ್ ಮಾಲ್' ಸಂಘಟನೆ ವತಿಯಿಂದ ಆಚರಿಸಲಾದ ಈದ್ ಮಿಲಾದ್ ಭಾವೈಕ್ಯತೆಯ ಸಂದೇಶ ಸಾರುವಂತಿತ್ತು.

ಯಾದಗಿರಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

By

Published : Nov 10, 2019, 8:38 PM IST

Updated : Nov 10, 2019, 9:17 PM IST

ಯಾದಗಿರಿ : ನಗರದಲ್ಲಿ ಈದ್ ಮಿಲಾದ್​ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. 'ಸಂಜಿಮುಲ್ ಮುಸ್ಲೀಂ ಮಿನ್ ಬೈತುಲ್ ಮಾಲ್' ಸಂಘಟನೆ ವತಿಯಿಂದ ಆಚರಿಸಲಾದ ಈದ್ ಮಿಲಾದ್ ಭಾವೈಕ್ಯತೆಯ ಸಂದೇಶ ಸಾರುವಂತಿತ್ತು. ನಗರದ ಮೈಲಾಪುರ ಬೇಸ್ ಬಳಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸಮಾಜದ ಮುಖಂಡರು ಭಾಗಿಯಾಗಿದ್ದು ವಿಶೇಷವಾಗಿತ್ತು.

ಯಾದಗಿರಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

ಖಾಸಾಮಠದ ಶ್ರೀ ಶಾಂತವೀರ ಮುರಘರಾಜೇಂದ್ರ ಸ್ವಾಮೀಜಿಗಳು ಸಮಾರಂಭದ ಸಾನಿಧ್ಯವಹಿಸಿ ಜನರಿಗೆ ಆಶೀರ್ವಚನ ನೀಡಿದರು. ಕಾರ್ಯಕ್ರಮದ ನಂತರ ಮಕ್ಕಾ, ಮದಿನಾ, ಜಸ್ಥಾನ ಅಜಮೇರ್ ದರ್ಗಾ, ದೆಹಲಿಯ ನಿಜಾಮುದ್ದೀನ್ ದರ್ಗಾಗಳ ಪ್ರತಿಕೃತಿಗಳನ್ನು ಮೆರವಣಿಗೆ ಮಾಡಲಾಯಿತು. ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಂಚರಿಸಿ ಜನರ ಗಮನ ಸೆಳೆಯಿತು.

ಮಾಜಿ ಸಚಿವ ಎ.ಬಿ. ಮಾಲಕರೆಡ್ಡಿ, ಶಾಸಕ ನಾಗನಗೌಡ ಕಂದಕೂರು ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿಂದೂ ಹಾಗೂ ಕ್ರೈಸ್ತ ಮುಖಂಡರಿಗೆ ಸನ್ಮಾನ ಮಾಡಲಾಯಿತು.

Last Updated : Nov 10, 2019, 9:17 PM IST

For All Latest Updates

ABOUT THE AUTHOR

...view details