ಕರ್ನಾಟಕ

karnataka

ETV Bharat / state

ಕುಡಿದ ಮತ್ತಿನಲ್ಲಿ ನಿವೃತ್ತ ಪಿಎಸ್​ಐ ಅಧಿಕಾರಿ ಮೇಲೆಯೇ ಹಲ್ಲೆ ಮಾಡಿದ ಕುಡುಕ - drunker hits in belt

ನಗರದ ಹೊಸಳ್ಳಿ ಕ್ರಾಸ್ ಸಮೀಪ ಕುಡಕನೊಬ್ಬ ನಿವೃತ್ತ ಪಿಎಸ್​ಐ ಅಧಿಕಾರಿಗೆ ಹಲ್ಲೆ ಮಾಡಿದ್ದಾನೆ. ಮಾಣಿಕೇಶ್ವರಿ ನಗರದ ನಿವಾಸಿ ಸಂಚಾರಿ ಠಾಣೆಯ ನಿವೃತ್ತ ಪಿಎಸ್​ಐ ಸುಖದೇವ ಬೆಲಿಕೇರಿ ಎಂಬುವವರ ಮೇಲೆ ಹಲ್ಲೆ ನಡೆದಿದ್ದು, ಕುಡುಕನ ಬಗ್ಗೆ ಇನ್ನೂ ಮಾಹಿತಿ ಪತ್ತೆಯಗಿಲ್ಲ.

ydr

By

Published : Nov 12, 2019, 4:02 PM IST

ಯಾದಗಿರಿ:ಕುಡಕನೊಬ್ಬನಿಗೆ ನಿವೃತ್ತ ಪಿಎಸ್​ಐ ಅಧಿಕಾರಿ ಬುದ್ದಿ ಮಾತು ಹೇಳಿದಕ್ಕೆ ಆ ಕುಡುಕ ನಿವೃತ್ತ ಅಧಿಕಾರಿ ಮೇಲೆಯೇ ಬೆಲ್ಟ್​ನಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಡೆದಿದೆ.

ನಗರದ ಹೊಸಳ್ಳಿ ಕ್ರಾಸ್ ಸಮೀಪ ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಮಾಣಿಕೇಶ್ವರಿ ನಗರದ ನಿವಾಸಿ ಸಂಚಾರಿ ಠಾಣೆಯ ನಿವೃತ್ತ ಪಿಎಸ್​ಐ ಸುಖದೇವ ಬೆಲಿಕೇರಿ ಎಂಬುವವರ ಮೇಲೆ ಹಲ್ಲೆ ನಡೆದಿದೆ. ಕುಡುಕನ ಬಗ್ಗೆ ಇನ್ನೂ ಮಾಹಿತಿ ಪತ್ತೆಯಾಗಿಲ್ಲ

ನಿವೃತ್ತ ಪಿಎಸ್​ಐ ಅಧಿಕಾರಿ ಸುಖದೇವ ಬೆಲಿಕೇರಿ

ಸುಖದೇವ ಬೆಲಿಕೇರಿ ಅವರು ಮನೆಗೆ ಬೈಕ್ ಮೇಲೆ ತೆರಳಬೇಕು ಎಂದು ಹೊಸಳ್ಳಿ ಕ್ರಾಸ್ ಬಳಿ ನಿಂತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿ ಕುಡಿದ ಮತ್ತಿನಲ್ಲಿ ಬಂದು ನಿವೃತ್ತ ಪಿಎಸ್​ಐ ಬಳಿ ಬೈಕ್ ಲಿಫ್ಟ್ ಕೇಳಿದ್ದಾನೆ. ಈ ವೇಳೆ, ನಡೆದುಕೊಂಡು ಹೋಗು ಎಂದು ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗೆ ಪಿಎಸ್​ಐ ಬುದ್ದಿ ಮಾತು ಹೇಳಿದ್ದಾರೆ.

ಬುದ್ದಿ‌ ಮಾತು ಹೇಳಿದ್ದಕ್ಕೆ ಕೋಪಗೊಂಡ ಕುಡುಕ ಬೆಲ್ಟ್​ನಿಂದ ಸುಖದೇವ ಅವರ ಕಣ್ಣು ಹಾಗೂ ತಲೆಯ ಭಾಗಕ್ಕೆ ಹೊಡೆದು ಹಲ್ಲೆ ನಡೆಸುವುದರ ಜೊತೆ ಅಲ್ಲಿದ್ದ ಇನ್ನಿಬ್ಬರ ಮೇಲೆಯೂ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಹಲ್ಲೆಗೊಳಗಾದ ಸುಖದೇವ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಕುಡುಕನ ಅವಾಂತರದಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು, ಯಾದಗಿರಿ ನಗರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ABOUT THE AUTHOR

...view details