ಯಾದಗಿರಿ :ಹೆಂಡತಿಯ ಶೀಲ ಶಂಕಿಸಿ ಪಾಪಿ ಗಂಡ ಆಕೆಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಶಹಾಪುರ ತಾಲೂಕಿನ ಹತ್ತಿರಗೂಡರ ಗ್ರಾಮದಲ್ಲಿ ನಡೆದಿದೆ.
ಶೀಲ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ - ಹೆಂಡತಿಯ ಶೀಲ ಶಂಕಿಸಿ ಕೊಲೆ
ಶೀಲ ಶಂಕಿಸಿದ ಪತಿ ಪತ್ನಿಯನ್ನು ಬರ್ಬರವಾಗಿ ಕೊಂದಿರುವ ಘಟನೆ ಶಹಾಪುರ ತಾಲೂಕಿನ ಹತ್ತಿರ ಗೂಡರ ಗ್ರಾಮದಲ್ಲಿ ನಡೆದಿದೆ.
ಹೆಂಡತಿ ಮೇಲೆ ಶಂಕೆ: ಕುಡಿದ ನಶೆಯಲ್ಲಿ ಬರ್ಬರವಾಗಿ ಹತ್ಯೆಗೈದ ಪಾಪಿ ಪತಿ
ಹತ್ತಿಗೂಡರ ಗ್ರಾಮದ ಯಲ್ಲಪ್ಪ ತನ್ನ ಹೆಂಡತಿ ರೇಣುಕಾಳನ್ನು ಹತ್ಯೆ ಮಾಡಿದ್ದಾನೆ. ಹೆಂಡತಿಯ ಶೀಲ ಶಂಕಿಸಿ ಆತ ಪ್ರತಿ ದಿನವೂ ಮನೆಯಲ್ಲಿ ಜಗಳವಾಡುತ್ತಿದ್ದ ಎನ್ನಲಾಗಿದೆ.
ಇಂದು ಮುಂಜಾನೆ ಕುಡಿದ ಅಮಲಿನಲ್ಲಿ ಮನೆಗೆ ಬಂದ ಆತ ಕೊಡಲಿಯಿಂದ ಪತ್ನಿಯನ್ನು ಕೊಚ್ಚಿ ಹತ್ಯೆ ಮಾಡಿದ್ದಾನೆ.
ಶಹಾಪುರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಯಲ್ಲಪ್ಪ ಪೊಲೀಸರ ವಶದಲ್ಲಿದ್ದಾನೆ.