ಯಾದಗಿರಿ : ಸಕಾಲಕ್ಕೆ ಮಳೆ ಬಾರದ ಹಿನ್ನಲೆಯಲ್ಲಿ ಜಮೀನಿನಲ್ಲಿ ನಾಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಶಹಾಪುರ ತಾಲೂಕಿನ ಗುಂಡಳ್ಳಿ ತಾಂಡಾದದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೀಜ ಬಿತ್ತನೆ ಮಾಡಿದ್ದು, ಆದರೆ ನಾಟಿ ಮಾಡಲು ಮಳೆಯಿಲ್ಲದೆ ಪರಿತಪಿಸುತ್ತಿದ್ದಾರೆ. ನಾವು ಎಷ್ಟೇ ಕಷ್ಟ ಪಟ್ಟರೂ ಮಳೆ ಬಂದರಷ್ಟೇ ಫಸಲು ಎಂದು ಅಳಲು ತೋಡಿಕೊಂಡಿದ್ದಾರೆ.
ಮಳೆಯಿಲ್ಲದೇ ರೈತರು ಕಂಗಲಾಗಿರುವುದು ಭೀಕರ ಬರಗಾಲ ಆವರಿಸಿ ನಾಲ್ಕು ವರ್ಷಗಳು ಗತಿಸಿದ್ದು, ಮುಂಗಾರ ಅವಧಿಯಿದ್ದ ಪರಿಣಾಮ ಮಳೆ ಬಂದ್ರೆ ಚೆನ್ನಾಗಿರುತ್ತಿತ್ತು. ಆದರೆ ಮಳೆ ಬಾರದ ಹಿನ್ನಲೆಯಲ್ಲಿ ಜಮೀನಿನಲ್ಲಿ ಹತ್ತಿ , ಹೆಸರು ನಾಟಿ ಮಾಡಲಾಗಿದೆ. ಆದ್ರೆ ಬೀಜ ಬಿತ್ತನೆಯಾದ್ರೂ ನಾಟಿ ಮಾಡಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳೆಯಾಗದೆ ದನಕರುಗಳಿಗೆ ಕುಡಿಯಲು ನೀರು ಹಾಗೂ ಮೇವು ಸಿಗದಂತಾಗಿದೆ. ಹೀಗಾಗಿ ಜಿಲ್ಲಾಡಳಿತ ಮೇವು ಬ್ಯಾಂಕ್ಗಳನ್ನು ಸ್ಥಾಪನೆ ಮಾಡಬೇಕು. ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಬೇಕೆಂದು ಆಗ್ರಹಸಿದ್ದಾರೆ.