ಕರ್ನಾಟಕ

karnataka

ETV Bharat / state

ಕೋವಿಡ್​ ನೆಗೆಟಿವ್ ವರದಿ ಕೇಳಿದ್ದಕ್ಕೆ ಕಾನ್ಸ್​ಟೇಬಲ್​ ಮೇಲೆ ಲಾರಿ ಹರಿಸಲು ಯತ್ನ

ಯರಗೋಳ ಚೆಕ್ ಪೋಸ್ಟ್​​​ನಲ್ಲಿ ಲಾರಿ ಚಾಲಕನಿಗೆ ಪೊಲೀಸ್ ಕಾನ್ಸ್​ಟೇಬಲ್​ ಕೋವಿಡ್ ನೆಗೆಟಿವ್ ವರದಿ ಕೇಳಲು ಮುಂದಾದಾಗ, ಚಾಲಕ ಪೊಲೀಸ್​ ಮೇಲೆ ಲಾರಿ ಹಾಯಿಸಲು ಯತ್ನಿಸಿದ್ದಾನೆ ಎಂದು ಹೇಳಲಾಗುತ್ತಿದೆ.

Checking
ನೆಗೆಟಿವ್ ವರದಿ ಕೇಳಿದ್ದಕ್ಕೆ ಕಾನ್ಸ್​ಟೇಬಲ್​ಗೆ ಅವಾಜ್​ ಹಾಕಿದ ಚಾಲಕ

By

Published : Nov 29, 2021, 9:25 AM IST

ಯಾದಗಿರಿ: ಕೋವಿಡ್ ತಪಾಸಣೆ ವೇಳೆ ಲಾರಿ ಚಾಲಕನೊಬ್ಬ ಬ್ಯಾರಿಕೇಡ್‌ಗೆ ವಾಹನ ಗುದ್ದಿಸಿ ಚೆಕ್​ಪೋಸ್ಟ್ ನಲ್ಲಿದ್ದ ಪೊಲೀಸ್ ಕಾನ್ಸ್​ಟೇಬಲ್​ ಮೇಲೆ ಲಾರಿ ಹರಿಸಲು ಯತ್ನಿಸಿದ ಘಟನೆ ತಾಲೂಕಿನ ಯರಗೋಳದಲ್ಲಿ ನಡೆದಿದೆ.

ಯರಗೋಳ ಚೆಕ್ ಪೋಸ್ಟ್​​​ನಲ್ಲಿ ಲಾರಿ ಚಾಲಕನಿಗೆ ಕೋವಿಡ್ ನೆಗೆಟಿವ್ ವರದಿ ಕೇಳಲು ಪೊಲೀಸರು ಮುಂದಾದಾಗ ಕಾನ್ಸ್​ಟೇಬಲ್ ಮಾತು ಕೇಳದೇ ಚಾಲಕ ಲಾರಿ ಹಾಯಿಸಲು ಯತ್ನಿಸಿದ್ದಾನೆ. ಈ ವೇಳೆ, ಲಾರಿ ತಡೆದ ಪೊಲೀಸ್ ಕಾನ್ಸ್​ಟೇಬಲ್ ಬಸವರಾಜ, ಮೊದಲು ಕೋವಿಡ್ ನೆಗೆಟಿವ್ ರಿಪೋರ್ಟ್ ತೋರಿಸಿ, ಇಲ್ಲವೇ ಕೋವಿಡ್ ಟೆಸ್ಟ್ ಮಾಡಿಕೊಂಡು ಹೋಗಬೇಕೆಂದು ಖಡಕ್ ಎಚ್ಚರಿಕೆ ನೀಡಿದರು.

ಇದಕ್ಕೆ ಲಾರಿ ಚಾಲಕ, ನಾನೇಕೆ ರಿಪೋರ್ಟ್ ತೋರಿಸಬೇಕೆಂದು ಫುಲ್ ಆವಾಜ್ ಹಾಕಿ ಕಾನ್ಸ್​ಟೇಬಲ್​ಗೆ ಬೆದರಿಸಿದ್ದಾನೆ. ರಾಜಸ್ಥಾನದಿಂದ ಯಾದಗಿರಿ ಕಡೆಗೆ ಲಾರಿ ಬರುತ್ತಿತ್ತು ಎಂದು ತಿಳಿದುಬಂದಿದೆ.

ನೆಗೆಟಿವ್ ವರದಿ ಕೇಳಿದ್ದಕ್ಕೆ ಕಾನ್ಸ್​ಟೇಬಲ್​ಗೆ ಅವಾಜ್​ ಹಾಕಿದ ಚಾಲಕ

ಇದನ್ನೂ ಓದಿ:ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭ.. 3 ಕೃಷಿ ಕಾನೂನುಗಳು ವಾಪಸ್​​!

ನಂತರ ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹಾಗೂ ಪೊಲೀಸ್ ಕಾನ್ಸ್​ಟೇಬಲ್ ಸೇರಿ ಲಾರಿ ಚಾಲಕನನ್ನು ಕೆಳಗಿಳಿಸಿ, ಕೋವಿಡ್ ಟೆಸ್ಟ್ ಮಾಡಿಸಿ ನಂತರ ಜಿಲ್ಲೆಯೊಳಗೆ ತೆರಳಲು ಬಿಟ್ಟರು.

ಹೊಸ ರೂಪಾಂತರಿ ತಳಿ ವೈರಸ್ ಪತ್ತೆಯಾದ ಹಿನ್ನೆಲೆ ಯಾದಗಿರಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯ ಗಡಿಭಾಗದ ಚೆಕ್​ಪೋಸ್ಟ್ ಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಯರಗೋಳ ಚೆಕ್ ಪೋಸ್ಟ್​ನಲ್ಲಿ ಮಹಾರಾಷ್ಟ್ರ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದ್ದು, ಚೆಕ್‌ಪೋಸ್ಟ್ ಸಿಬ್ಬಂದಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೋವಿಡ್​ ಟೆಸ್ಟ್ ಮಾಡಿಯೇ ಬಿಡುತ್ತಿದ್ದಾರೆ.

ABOUT THE AUTHOR

...view details