ಕರ್ನಾಟಕ

karnataka

ETV Bharat / state

ಯಾದಗಿರಿ ಜಿಲ್ಲಾಸ್ಪತ್ರೆಯ ಕಾಯಕಲ್ಪ ಯೋಜನೆ ಅನುಷ್ಠಾನ ಪರಿಶೀಲಿಸಿದ ಡಾ. ಹಬೀಬ್ ಉಸ್ಮಾನ್ ಪಟೇಲ್ - ಯಾದಗಿರಿ ಜಿಲ್ಲಾಸ್ಪತ್ರೆ

ಕಾಯಕಲ್ಪ ಯೋಜನೆ ಅನುಷ್ಠಾನ ಕುರಿತು ಕಲಬುರಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ. ಹಬೀಬ್ ಉಸ್ಮಾನ್ ಪಟೇಲ್ ಇಂದು ಯಾದಗಿರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು‌.

Dr. Habib Usman Patel reviewed the implementation of the management Program in Yadagiri District hospital
ಯಾದಗಿರಿ ಜಿಲ್ಲಾಸ್ಪತ್ರೆಯ ಕಾಯಕಲ್ಪ ಯೋಜನೆ ಅನುಷ್ಠಾನ ಪರಿಶೀಲಿಸಿದ ಡಾ. ಹಬೀಬ್ ಉಸ್ಮಾನ್ ಪಟೇಲ್

By

Published : Feb 12, 2020, 11:42 PM IST

ಯಾದಗಿರಿ: ಕಾಯಕಲ್ಪ ಯೋಜನೆ ಅನುಷ್ಠಾನ ಕುರಿತು ಕಲಬುರಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ. ಹಬೀಬ್ ಉಸ್ಮಾನ್ ಪಟೇಲ್ ಇಂದು ಯಾದಗಿರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು‌.

ಯಾದಗಿರಿ ಜಿಲ್ಲಾಸ್ಪತ್ರೆಯ ಕಾಯಕಲ್ಪ ಯೋಜನೆ ಅನುಷ್ಠಾನ ಪರಿಶೀಲಿಸಿದ ಡಾ. ಹಬೀಬ್ ಉಸ್ಮಾನ್ ಪಟೇಲ್

ಈ ಹಿಂದೆ ಕೂಡ ಯಾದಗಿರಿ ಜಿಲ್ಲಾಸ್ಪತ್ರೆಯು ಸ್ವಚ್ಛತೆ ಹಾಗೂ ರೋಗಿಗಳಿಗೆ ಉತ್ತಮ ಸೇವೆ ನೀಡಿದ ಹಿನ್ನೆಲೆ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿತ್ತು. ಈಗ ಮತ್ತೆ ಸಮರ್ಪಕವಾಗಿ ಕಾಯಕಲ್ಪ ಯೋಜನೆ ಅನುಷ್ಠಾನ ಮಾಡಲು ಆರೋಗ್ಯ ಇಲಾಖೆಯು ಯಾದಗಿರಿ ಜಿಲ್ಲಾಸ್ಪತ್ರೆ, ಸುರಪುರ ತಾಲೂಕು ಆಸ್ಪತ್ರೆ ಹಾಗೂ ಹುಣಸಗಿ ಸಮುದಾಯ ಆರೋಗ್ಯ ಕೇಂದ್ರ ಆಯ್ಕೆ ಮಾಡಿದ್ದ ಹಿನ್ನಲೆ, ಆರೋಗ್ಯ ಇಲಾಖೆ ಉಪನಿರ್ದೇಶಕ ಡಾ. ಹಬೀಬ್ ಉಸ್ಮಾನ್ ಪಟೇಲ್ ಅವರು ಯಾದಗಿರಿ ಜಿಲ್ಲಾಸ್ಪತ್ರೆಯನ್ನು ಪರಿಶೀಲನೆ ಮಾಡಿದರು‌.

ಭೇಟಿ ವೇಳೆ ಸ್ವಚ್ಛತೆ ಕಾಪಾಡುವ ಜೊತೆ ರೋಗಿಗಳಗೆ ಸರಿಯಾಗಿ ಸೌಲಭ್ಯ ಕಲ್ಪಿಸಬೇಕೆಂದು ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ABOUT THE AUTHOR

...view details