ಸುರಪುರ(ಯಾದಗಿರಿ):ತಾಲೂಕಿನ ಹಾಲಬಾವಿ ಗ್ರಾಮದಲ್ಲಿ 4 ನಾಯಿಗಳ ಹಿಂಡೊಂದು ದಾಳಿ ಮಾಡಿ 15 ಕುರಿಗಳನ್ನು ಕೊಂದು ಹಾಕಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಹಾಲಬಾವಿ ಗ್ರಾಮದ ಭೂಮಣ್ಣ ಅಸ್ಕಿ ಎಂಬ ಕುರಿಗಾಹಿಯು ಕುರಿಗಳನ್ನು ಮೇಯಿಸಿಕೊಂಡು ಬಂದು ಸಣಜೆ ವೇಳೆ ಹೊಲದಲ್ಲಿನ ಕುರಿ ದೊಡ್ಡಿಯಲ್ಲಿ ಹಾಕಿ ಮನೆಗೆ ಊಟಕ್ಕೆಂದು ಹೋಗಿದ್ದಾನೆ. ಮನೆಗೆ ಹೋಗಿ ರಾತ್ರಿ 10 ಗಂಟೆ ವೇಳೆಗೆ ಮರಳಿ ಬರುವಷ್ಟರಲ್ಲಿ ಗ್ರಾಮದ 3 - 4 ನಾಯಿಗಳ ಹಿಂಡು 110 ಕುರಿಗಳಲ್ಲಿ 15 ಕುರಿಗಳನ್ನು ಕೊಂದು ಹಾಕಿವೆ. ಅಲ್ಲದೆ 25 ಕುರಿಗಳು ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿವೆ.