ಕರ್ನಾಟಕ

karnataka

ETV Bharat / state

ಬಾಣಂತಿ ಮೃತಪಟ್ಟ ಪ್ರಕರಣದಲ್ಲಿ ಸಂಬಂಧಿಕರ ಗಲಾಟೆ... ಆಸ್ಪತ್ರೆ ಒಪಿಡಿ ಬಂದ್​ ಮಾಡಿ ವೈದ್ಯರ ಧರಣಿ

ಇಂದು ವೈದ್ಯರು ನಗರದ 25 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಯ ಒಪಿಡಿ ಹಾಗೂ ಲ್ಯಾಬ್​ಗಳನ್ನು ಬಂದ್ ಮಾಡಿಸಿ ಸಾಂಕೇತಿಕ ಧರಣಿ ನಡೆಸ್ತಿದ್ದಾರೆ.‌

By

Published : Feb 10, 2020, 1:52 PM IST

Adarsh hospital
ಆಸ್ಪತ್ರೆ ಒಪಿಡಿ ಬಂದ್

ಯಾದಗಿರಿ:ನಗರದ ಆದರ್ಶ ಆಸ್ಪತ್ರೆಯಲ್ಲಿ ಶನಿವಾರ ನಡೆದಿದ್ದ ಗಲಾಟೆ ಪ್ರಕರಣ ಖಂಡಿಸಿ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸದಸ್ಯ ವೈದ್ಯರು ನಗರದ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಿಸಿ ಸಾಂಕೇತಿಕ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

ಆಸ್ಪತ್ರೆ ಒಪಿಡಿ ಬಂದ್​ ಮಾಡಿ ವೈದ್ಯರ ಧರಣಿ

ಕಳೆದ ಶನಿವಾರ ಮನಗಿನಾಳ ಗ್ರಾಮದ ಕಲಾವತಿ ಹೆರಿಗೆ ಬಳಿಕ ನಗರದ ಖಾಸಗಿ ಆದರ್ಶ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.‌ ತಕ್ಷಣ ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ್ದ ಕಲಾವತಿ ಕುಟುಂಬಸ್ಥರು ಗಲಾಟೆ ನಡೆಸಿದ್ದರು. ಅಲ್ಲದೆ ಆಸ್ಪತ್ರೆ ಗಾಜು ಒಡೆದು, ವೈದ್ಯ ಪ್ರೇಮಾ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ಈ ಹಿನ್ನೆಲೆಯಲ್ಲಿ ಇಂದು ವೈದ್ಯರು ನಗರದ 25 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಯ ಒಪಿಡಿ ಹಾಗೂ ಲ್ಯಾಬ್​ಗಳನ್ನು ಬಂದ್ ಮಾಡಿಸಿ ಸಾಂಕೇತಿಕ ಧರಣಿ ನಡೆಸ್ತಿದ್ದಾರೆ.‌

ಧರಣಿ ನಿರತ ವೈದ್ಯರು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಅವರನ್ನು ಭೇಟಿಯಾಗುವ ಮೂಲಕ ಘಟನೆ ಕುರಿತು ಮಾಹಿತಿ ನೀಡಲಾಗಿದೆ ಎಂದು ವೈದ್ಯ ಮಂಡಳಿಯ ಸದಸ್ಯರು ತಿಳಿಸಿದ್ದಾರೆ.

ABOUT THE AUTHOR

...view details