ಯಾದಗಿರಿ: ಸರಳ ಹಾಗೂ ಸಜ್ಜನಿಕೆಯ ಸಾಹಿತಿ ಡಿ.ಎನ್. ಅಕ್ಕಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿರುವುದು ಜಿಲ್ಲೆಯ ಜನರ ಹಿರಿಮೆಗೆ ಕಾರಣವಾಗಿದೆ.
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಾಹಿತಿ ಡಿ.ಎನ್ ಅಕ್ಕಿ: ಯಾದಗಿರಿ ಜನತೆಗೆ ಹರ್ಷ - ಸಾಹಿತಿ ಡಿ ಎನ್ ಅಕ್ಕಿ ಲೆಟೆಸ್ಟ್ ನ್ಯೂಸ್
ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೌರವಕ್ಕೆ ಜಿಲ್ಲೆಯ ಹಿರಿಯ ಸಹಿತಿ ಡಿ.ಎನ್ ಅಕ್ಕಿ ಅವರು ಭಾಜನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ನಿವಾಸಿಯಾದ ಡಿ. ಎನ್. ಅಕ್ಕಿ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಹಿರಿಯ ಸಾಹಿತಿ. ಅವರ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದ್ದು, ಜಿಲ್ಲೆಯ ಸಾಹಿತ್ಯ ಲೋಕಕ್ಕೆ ಖುಷಿ ತಂದಿದೆ. ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅಕ್ಕಿಯವರು 25ಕ್ಕೂ ಹೆಚ್ಚು ಕವನ ಸಂಕಲನ, ಬಾನುಲಿ ನಾಟಕ, ಜೈನ ಜನಪದ ಹಾಡುಗಳು ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳನ್ನು ರಚನೆ ಮಾಡಿದ್ದಾರೆ.
ಈ ಹಿಂದೆ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ, ಮಹಾರಾಷ್ಟ್ರ ಆಚಾರ್ಯ ಬಾಹುಬಲಿ ಕನ್ನಡ ಸಾಹಿತ್ಯ ಪುರಸ್ಕಾರಗಳು, ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಡಿ ಎನ್ ಅಕ್ಕಿ ಮುಡಿಗೇರಿಸಿಕೊಂಡಿದ್ದಾರೆ.