ಸುರಪುರ:ಬಿಜೆಪಿಯವರದು ರಾಜ್ಯ ಮತ್ತು ಸಮುದಾಯ ಒಡೆಯುವ ಕೆಲಸ, ಕಾಂಗ್ರೆಸ್ ಪಕ್ಷದ್ದು ಕೂಡಿಸುವ ಕೆಲಸ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸೋಮವಾರ ರಾತ್ರಿ ಸುರಪುರ ನಗರಕ್ಕೆ ಆಗಮಿಸಿದ ಡಿಕೆಶಿ ಅವರು, ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಬಳಿಕ ಮಾತನಾಡಿದ ಅವರು "ಬೆಂಗಳೂರು ಚುನಾವಣೆ ಬೇರೆ, ಇಲ್ಲಿಯ ಚುನಾವಣೆಯೇ ಬೇರೆ. ಮಸ್ಕಿ ಕ್ಷೇತ್ರದ ಉಪಚುನಾವಣೆ ಎದುರಿಸಲು ಈಗಾಗಲೇ ಕಾಂಗ್ರೆಸ್ ಪಕ್ಷವು ತಳಮಟ್ಟದಿಂದ ಚುನಾವಣೆ ಕಾರ್ಯತಂತ್ರ ರೂಪಿಸಿ, ಸಂಘಟನೆ ಮಾಡಲಾಗುತ್ತಿದೆ. ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಉತ್ತಮ ಫಲಿತಾಂಶ ಬರಲಿದೆ ಎನ್ನುವ ಮೂಲಕ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.