ಕರ್ನಾಟಕ

karnataka

ETV Bharat / state

ಸುರಪುರದ ತೊಯ್ಬಾ ಟ್ರಸ್ಟ್​​ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್​ ವಿತರಣೆ - ಸುರಪುರದ ತೊಯ್ಬಾ ಟ್ರಸ್ಟ್​​ ವತಿಯಿಂದ ಆಹಾರ ಸಾಮಾಗ್ರಿಗಳ ಕಿಟ್​ ವಿತರಣೆ

ಲಾಕ್ ಡೌನ್​ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಸುರಪುರ ಪಟ್ಟಣದ ರಂಗನಪೇಟೆಯ ತೊಯ್ಬಾ ಟ್ರಸ್ಟ್​ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್​ ವಿತರಿಸಲಾಯಿತು.

Distribution of Food Kit by Toiba Trust of Surapur
Distribution of Food Kit by Toiba Trust of Surapur

By

Published : Apr 20, 2020, 12:36 PM IST

ಸುರಪುರ: ನಗರದ ರಂಗನಪೇಟೆಯ ತೊಯ್ಬಾ ಟ್ರಸ್ಟ್​ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್​ ವಿತರಿಸಲಾಯಿತು.

ಮದರಸಾ ಆವರಣದಲ್ಲಿ ನಡೆದ ಕಿಟ್​ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೊಯ್ಬಾ ಟ್ರಸ್ಟ್​​ ಅಧ್ಯಕ್ಷ ಅಸ್ಗರ್​ ಹುಸೇನ್ ವಹಿಸಿದ್ದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೊಲೀಸ್​ ಇನ್ಸ್​​ಪೆಕ್ಟರ್​ ಸಾಹೇಬಗೌಡ ಎಂ.ಪಾಟೀಲ ಮಾತನಾಡಿ, ಕೊರೊನಾ ನಿರ್ಮೂಲನೆಗೆ ಎಲ್ಲರ ಸಹಕಾರ ಅತ್ಯಗತ್ಯ. ಲಾಕ್ ಡೌನ್ ವೇಳೆ ಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ತೊಯ್ಬಾ ಟ್ರಸ್ಟ್ ಆಹಾರ ಸಾಮಾಗ್ರಿಗಳ ಕಿಟ್​ ವಿತರಿಸುತ್ತಿರುವುದು ಶ್ಲಾಘನೀಯ ಎಂದರು. ​

ತೊಯ್ಬಾ ಟ್ರಸ್ಟ್​​ ವತಿಯಿಂದ ಆಹಾರ ಸಾಮಾಗ್ರಿಗಳ ಕಿಟ್​ ವಿತರಣೆ

ಆಯ್ದ ನೂರು ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್​ ವಿತರಿಸಲಾಯಿತು. ಜನರು ಸರತಿ ಸಾಲಿನಲ್ಲಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ಕಿಟ್ ಪಡೆದರು. ಈ ಸಂದರ್ಭದಲ್ಲಿ ನಗರ ಸಭೆ ಮಾಜಿ ಅಧ್ಯಕ್ಷ ಅಬ್ದುಲ್ ಗಫೂರ್ ನಗನೂರಿ ಹಾಗೂ ಶೇಖ್ ಮಹಿಬೂಬ ಒಂಟಿ ಇದ್ದರು.

For All Latest Updates

TAGGED:

ABOUT THE AUTHOR

...view details