ಕರ್ನಾಟಕ

karnataka

ETV Bharat / state

ತಿಮ್ಮಾಪುರದಲ್ಲಿ ನಿರ್ಮಿಸುತ್ತಿರುವ ಚರಂಡಿ ಕಾಮಗಾರಿ ಅಳತೆಯಲ್ಲಿ ವ್ಯತ್ಯಾಸ: ಸಾರ್ವಜನಿಕರ ವಿರೋಧ - ಚರಂಡಿ ಕಾಮಗಾರಿ ಅಳತೆಯಲ್ಲಿ ವ್ಯತ್ಯಾಸ: ಸಾರ್ವಜನಿಕರ ವಿರೋಧ

ಸುರಪುರದ ರಂಗಂಪೇಟೆ ತಿಮ್ಮಾಪುರದಲ್ಲಿ ನಿರ್ಮಿಸುತ್ತಿರುವ ಚರಂಡಿ ಕಾಮಗಾರಿ ಉದ್ದ, ಅಳತೆ ಹಾಗೂ ಕಿರು ಸೇತುವೆಗಳ ನಿರ್ಮಾಣದಲ್ಲಿನ ವ್ಯತ್ಯಾಸಕ್ಕೆ ಸಾರ್ವಜನಿಕರ ವಿರೋಧ ವ್ಯಕ್ತಪಡಿಸಿದ್ದಾರೆ.

Differentiation in the drainage system
ಚರಂಡಿ ಕಾಮಗಾರಿ ಅಳತೆಯಲ್ಲಿ ವ್ಯತ್ಯಾಸ: ಸಾರ್ವಜನಿಕರ ವಿರೋಧ

By

Published : Jul 13, 2020, 11:05 AM IST

ಸುರಪುರ: ನಗರದ ತಿಮ್ಮಾಪುರದಲ್ಲಿ ನಿರ್ಮಿಸಲಾಗುತ್ತಿರುವ ಚರಂಡಿ ಕಾಮಗಾರಿ ಅಳತೆ ಕಡಿಮೆಯಾಗಿದ್ದು, ಅದನ್ನು ಹೆಚ್ಚಿಸಿ ಕಾಮಗಾರಿ ನಡೆಸಬೇಕು ಎಂದು ಸರ್ಕಾರಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಸುಮಾರು 30 ವರ್ಷಗಳ ಹಿಂದೆ ಕಲ್ಲಿನಿಂದ ಕಟ್ಟಿದ ಚರಂಡಿ ಇನ್ನೂ ಕಾಣಿಸುತ್ತಿದೆ. ಅಂದು ಕಟ್ಟಿದ ಚರಂಡಿಗೆ ಸುಮಾರು 7 ಕಡೆಗಳಲ್ಲಿ ಚಿಕ್ಕ ಮೋರಿಗಳೊಂದಿಗೆ ಉತ್ತಮವಾದ ಚರಂಡಿ ನಿರ್ಮಿಸಲಾಗಿತ್ತು. ಆದರೆ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಚರಂಡಿಯ ಅಳತೆ ಮೊದಲಿನಂತಿಲ್ಲ. ಆದ್ದರಿಂದ ಇನ್ನೂ ಹೆಚ್ಚಿನ ಉದ್ದಳತೆಯ ಚರಂಡಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಚರಂಡಿ ಕಾಮಗಾರಿ ಅಳತೆಯಲ್ಲಿ ವ್ಯತ್ಯಾಸ: ಸಾರ್ವಜನಿಕರ ವಿರೋಧ
ಈ ಕುರಿತು ಸ್ಥಳಿಯ ಮುಖಂಡ ಬಸವರಾಜ ವಾರದ ಮಾತನಾಡಿ, ಈಗ ನಿರ್ಮಿಸುತ್ತಿರುವ ಕಾಮಗಾರಿ ಸಂಪೂರ್ಣವಾಗಿಲ್ಲ. ವೀರಶೈವ ಕಲ್ಯಾಣ ಮಂಟಪದಿಂದ ಅಂಬೇಡ್ಕರ್ ಕಾಲೇಜು ಮೂಲಕ ಬರುವ ಚರಂಡಿ ಕಾಮಗಾರಿಯಲ್ಲಿ ಮೋರಿಗಳಿವೆ. ಅವುಗಳನ್ನು ನಿರ್ಮಿಸಬೇಕು. ಸದ್ಯ ಮಾಡುತ್ತಿರುವ ಕಾಮಗಾರಿ ಅಪೂರ್ಣವಾಗಿದೆ. ಇದರಿಂದ ಮಳೆಗಾಲದಲ್ಲಿ ನೀರು ಬಂದು ಕಾಮಗಾರಿ ಬೇಗನೆ ಹಾಳಾಗಲಿದೆ. ಆದ್ದರಿಂದ ಮೊದಲು ಇದ್ದ ಮೋರಿಗಳನ್ನು ಸೇರಿಸಿ ಕಾಮಗಾರಿ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details