ಸುರಪುರ (ಯಾದಗಿರಿ): ತಾಲೂಕಿನ ದೇವಾಪುರ ಕ್ರಾಸ್ ಮೂಲಕ ಆರಂಭಗೊಂಡು ವಿಜಯಪುರಕ್ಕೆ ತಲುಪುವ ದೇವಾಪುರ ಮನಗೂಳಿ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದು, ರಸ್ತೆ ಕೆಸರು ಗದ್ದೆಯಂತಾಗಿದೆ.
ಅರ್ಧಕ್ಕೆ ನಿಂತ ದೇವಾಪುರ-ಮನಗೂಳಿ ಹೆದ್ದಾರಿ ಕಾಮಗಾರಿ.. ಕೆಸರು ಗದ್ದೆಯಂತಾದ ರಸ್ತೆ - yadagiri news
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಕ್ರಾಸ್ ಮೂಲಕ ಆರಂಭಗೊಂಡು ವಿಜಯಪುರಕ್ಕೆ ತಲುಪುವ ದೇವಾಪುರ ಮನಗೂಳಿ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದು, ರಸ್ತೆ ತುಂಬೆಲ್ಲಾ ದೊಡ್ಡ-ಡೊಡ್ಡ ಗುಂಡಿಗಳಾಗಿ ಕೆಸರು ಗದ್ದೆಯಂತಾಗಿದೆ. ಹೀಗಾಗಿ ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ.
ದೇವಾಪುರ ಕ್ರಾಸ್‌ನಿಂದ ಆರಂಭಗೊಂಡ ರಸ್ತೆ ಕಾಮಗಾರಿಯಿಂದಾಗಿ ಕೆಲ ರೈತರು ತಮ್ಮ ಜಮೀನು ಕಳೆದುಕೊಂಡಿದ್ದು, ಪರಿಹಾರದ ಹಣ ನೀಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಕಾಮಗಾರಿ ನಿಲ್ಲಿಸಲಾಗಿದೆ. ಇದೀಗ ಮಳೆಗಾಲ ಆರಂಭವಾಗಿದ್ದು, ರಸ್ತೆ ತುಂಬೆಲ್ಲಾ ದೊಡ್ಡ-ಡೊಡ್ಡ ಗುಂಡಿಗಳಾಗಿ ರಸ್ತೆ ಕೆಸರು ಗದ್ದೆಯಂತಾಗಿದೆ. ಹೀಗಾಗಿ ವಾಹನ ಸವಾರರು ನಿತ್ಯ ಸರ್ಕಸ್ ನಡೆಸುವಂತಾಗಿದೆ.
ರಸ್ತೆಯ ಈ ಅವ್ಯವಸ್ಥೆ ಕಂಡು ಬೇಸರ ವ್ಯಕ್ತಪಡಿಸಿದ ಸಾಮಾಜಿಕ ಹೋರಾಟಗಾರ ಮಲ್ಲಿಕಾರ್ಜುನ ಬಾದ್ಯಾಪುರ, ಸರ್ಕಾರ ರೈತರಿಗೆ ಪರಿಹಾರದ ಹಣ ನೀಡುವುದರ ಜೊತೆಗೆ ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು. ಇಲ್ಲವಾದರೆ ನಿತ್ಯವು ಜನರಿಗೆ ನರಕ ದರ್ಶನವಾಗಲಿದೆ ಎಂದರು.