ಕರ್ನಾಟಕ

karnataka

ETV Bharat / state

ವಿಚಾರಣಾಧೀನ ಕೈದಿ ಸಾವು: ಜೈಲಾಧಿಕಾರಿ ನಿರ್ಲಕ್ಷ್ಯ ಆರೋಪ, ಪ್ರತಿಭಟನೆ - ವಿಚಾರಣಾದೀನ ಕೈದಿ ಸಾವು..!

ಎದೆ ನೋವು ಕಾಣಿಸಿಕೊಂಡಿದ್ದ ವಿಚಾರಣಾಧೀನ ಕೈದಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ, ಸಾವಿಗೆ ಜೈಲಾಧಿಕಾರಿಯ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ಸಂಬಂಧಿಕರು ನಗರದ ತಹಶೀಲ್ದಾರ್​ ಕಚೇರಿ ಎದುರು

death-of-a-trial-inmate-in-yadgir
ವಿಚಾರಣಾದೀನ ಕೈದಿ ಸಾವು..!

By

Published : Mar 11, 2020, 8:53 PM IST

ಯಾದಗಿರಿ: ಜಿಲ್ಲಾ ಕಾರಾಗೃಹದಲ್ಲಿ ಎದೆ ನೋವು ಕಾಣಿಸಿಕೊಂಡಿದ್ದ ವಿಚಾರಣಾಧೀನ ಕೈದಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ಠಾಣೆಯಲ್ಲಿ ಬಂಧಿತನಾಗಿದ್ದ ಆರೋಪಿ ಕಾಳಪ್ಪ (28) ಮೃತ ವ್ಯಕ್ತಿ, ಈತ ಯಾದಗಿರಿ ತಾಲೂಕಿನ ನಗಲಾಪುರ ಗ್ರಾಮದನು.

ಕಾರಗೃಹದಲ್ಲಿ ಎದೆ ನೋವು ಕಾಣಿಸಿಕೊಂಡಾಗ ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಗಿದೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟದ್ದು, ಹೃದಯಾಘಾತದಿಂದ ಈ ಕೈದಿ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಈತ ಕಳೆದ ತಿಂಗಳು ಟಿಕ್ ಟಾಕ್ ನಲ್ಲಿ ಒಂದು ಸಮುದಾಯವನ್ನು ನಿಂದನೆ ಮಾಡಿದ್ದ ವ್ಯಕ್ತಿಯ ಜೊತೆ ಜಗಳ ಮಾಡಿಕೊಂಡು ಜೈಲು ಸೇರಿದ್ದ ಎನ್ನಲಾಗಿದೆ.

ವಿಚಾರಣಾಧೀನ ಕೈದಿ ಸಾವು: ಜೈಲಾಧಿಕಾರಿ ನಿರ್ಲಕ್ಷ್ಯ ಆರೋಪ, ಪ್ರತಿಭಟನೆ

ಎದೆ ನೋವಿನಿಂದ ಮೂರು ದಿನಗಳಿಂದ ಬಳಲುತ್ತಿರುವ ಕಾಳಪ್ಪನನ್ನು ಜೈಲಾಧಿಕಾರಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿಲ್ಲ ಹಾಗಾಗಿ ಕಾಳಪ್ಪ ಮೃತಪಟ್ಟಿದ್ದನೆ ಎಂದು ಆರೋಪಿಸಿ ಕೈದಿ ಸಂಬಂಧಿಕರು ನಗರದ ತಹಶೀಲ್ದಾರ ಕಚೇರಿ ಎದರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕೂಡಲೇ ನಿಷ್ಕಾಳಜಿ ತೋರಿದ ಜೈಲಾಧಿಕಾರಿಯನ್ನ ಅಮಾನತು ಮಾಡುವ ಮೂಲಕ ಮೃತ ವಿಚಾರಾಣಾಧೀನ ಕೈದಿ ಕಾಳಪ್ಪ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details