ಗುರುಮಠಕಲ್: ಜಲಪಾತ ನೋಡಲು ಬಂದಿದ್ದ ರಾಜಸ್ಥಾನ ಪ್ರವಾಸಿಗ ನೀರುಪಾಲಾಗಿರುವ ಘಟನೆ ತಾಲೂಕಿನ ನಜರಾಪುರ ಸಮೀಪದ ಧಬೆಧಬೆ ಜಲಪಾತದದಲ್ಲಿ ನಡೆದಿದೆ.
ಜಲಪಾತ ನೋಡಲು ಬಂದ ಪ್ರವಾಸಿಗ ನೀರುಪಾಲು! - Gurumathkal of Yadagiri District
ಗುರುಮಠಕಲ್ ತಾಲೂಕಿನ ನಜರಾಪುರ ಸಮೀಪದ ಧಬೆಧಬೆ ಜಲಪಾತ ನೋಡಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಧಬೆ ಧಬೆ ಜಲಪಾತದಲ್ಲಿ ವ್ಯಕ್ತಿ ಸಾವು
ಬಾಯರಾಮ್(27) ಮೃತ ದುರ್ದೈವಿ. ಯಾದಗಿರಿಗೆ ಸಂಬಂಧಿಕರ ಮನೆಗೆ ಆಗಮಿಸಿದ್ದ ಈತ ಜಲಪಾತ ವೀಕ್ಷಣೆಗೆ ಹೋಗಿ ಈಜಲು ನೀರಿಗಿಳಿದಾಗ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತಹಶೀಲ್ದಾರ ಸಂಗಮೇಶ ಜಿಡಿಗೆ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದರೂ ಶವ ಪತ್ತೆಯಾಗಿಲ್ಲ.
ಜಲಪಾತ ನೋಡಲು ನಿತ್ಯವು ಸಾವಿರಾರು ಮಂದಿ ಬರುತ್ತಾರೆ. ಇಷ್ಟಾದರೂ ಸಹ ಪ್ರವಾಸೋದ್ಯಮ ಇಲಾಖೆ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ಕಾರಣ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.