ಕರ್ನಾಟಕ

karnataka

ETV Bharat / state

ಶಹಾಪುರ ತಾಲೂಕಿನಲ್ಲಿ 6 ವರ್ಷದ ಬಾಲಕಿ ಸಾವು: ಗಂಟಲು ದ್ರವ, ರಕ್ತದ ಮಾದರಿ ಪರೀಕ್ಷೆಗೆ ರವಾನೆ - ಶಹಾಪುರ ತಾಲೂಕಿನಲ್ಲಿ 6 ವರ್ಷದ ಬಾಲಕಿ ಸಾವು

ಕೆಲ ದಿನಗಳಿಂದ ತೀವ್ರ ಕೆಮ್ಮು, ನೆಗಡಿ, ಜ್ವರ ಮತ್ತು ಗಂಟಲು ನೋವಿನಿಂದ ಬಳಲುತ್ತಿದ್ದ ಶಹಾಪುರ ತಾಲೂಕಿನ ಕೊಂಗಂಡಿ ಗ್ರಾಮದ ಆರು ವರ್ಷದ ಬಾಲಕಿ ಇಂದು ಸಾವನ್ನಪ್ಪಿದ್ದಾಳೆ.

girl death
ಬಾಲಕಿ ಸಾವು

By

Published : Apr 7, 2020, 5:36 PM IST

ಯಾದಗಿರಿ:ತೀವ್ರ ಕೆಮ್ಮು, ನೆಗಡಿ, ಜ್ವರ ಮತ್ತು ಗಂಟಲು ನೋವಿನಿಂದ ಆರು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು, ಕೊರೊನಾ ಶಂಕೆಯಿಂದಾಗಿ ಬಾಲಕಿಯ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನ ಪರೀಕ್ಷೆಗಾಗಿ ಕಲಬುರಗಿಗೆ ರವಾನಿಸಲಾಗಿದೆ.

ಜಿಲ್ಲೆಯ ಶಹಾಪುರ ತಾಲೂಕಿನ ಕೊಂಗಂಡಿ ಗ್ರಾಮದ ಬಾಲಕಿ ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಏಪ್ರಿಲ್ 1ರಂದು ಬೆಂಗಳೂರಿನಿಂದ ಮೃತ ಬಾಲಕಿ ಕುಟುಂಬ ಕೊಂಡಳ್ಳಿ ಗ್ರಾಮಕ್ಕೆ ಬಂದಿತ್ತು. ಬಾಲಕಿ ಅನಾರೋಗ್ಯದಿಂದ ಬಳಲಿತ್ತಿದ್ದು, ಸ್ಥಳೀಯ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯಲಾಗುತ್ತಿತ್ತು.

ಇಂದು ಬೆಳಿಗ್ಗೆ ಅನಾರೋಗ್ಯ ತೀವ್ರವಾದ ಹಿನ್ನೆಲೆ ಶಹಾಪುರ ಆಸ್ಪತ್ರೆಗೆ ಕರೆ ತರುವ ಮಾರ್ಗ ಮಧ್ಯೆ ಬಾಲಕಿ ಮೃತಪಟ್ಟಿದ್ದು, ಬಾಲಕಿ ತೀವ್ರ ಕೆಮ್ಮು, ಗಂಟಲು ಮತ್ತು ನೆಗಡಿಯಿಂದ ಮೃತಪಟ್ಟಿದ್ದಕ್ಕಾಗಿ ಮೃತ ಬಾಲಕಿಯ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನ ಪರೀಕ್ಷೆಗಾಗಿ ಕಲಬುರಗಿಗೆ ರವಾನಿಸಲಾಗಿದೆ.

WHO ಪ್ರೋಟೋಕಾಲ್ ನಿಯಮದಂತೆ ಐದು ಜನ ಅಧಿಕಾರಿಗಳ ನೇತೃತ್ವದಲ್ಲಿ ಬಾಲಕಿಯ ಶವ ಸಂಸ್ಕಾರವನ್ನು ಸ್ವಗ್ರಾಮದಲ್ಲಿ ನೆರವೇರಿಸಲಾಗಿದೆ.

ABOUT THE AUTHOR

...view details