ಗುರುಮಠಕಲ್: ತಾಲೂಕಿನ ನಜರಾಪುರ ಸಮೀಪದ ಧಬೆ ಧಬೆ ಜಲಪಾತಕ್ಕೆ ಈಜಲು ತೆರಳಿದ್ದ ವ್ಯಕ್ತಿ ಇಂದು ಶವವಾಗಿ ಪತ್ತೆಯಾಗಿದ್ದಾನೆ.
ಧಬೆ ಧಬೆ ಜಲಪಾತದಲ್ಲಿ ಈಜಲು ತೆರಳಿದ ವ್ಯಕ್ತಿ ಶವವಾಗಿ ಪತ್ತೆ ರಾಜಸ್ತಾನ ಮೂಲದ ಬಾಯರಾಮ್ (23) ಮೃತ ದುರ್ದೈವಿ. ಇಲ್ಲಿನ ಸೈದಾಪುರದ ಸಂಬಂಧಿಕರ ಮನೆಗೆ ಬಂದಿದ್ದ ಬಾಯರಾಮ್, ಜಲಪಾತ ನೋಡಲು ಸಂಬಂಧಿಕರ ಜೊತೆ ಬಂದಿದ್ದಾನೆ. ಈ ವೇಳೆ ನೀರಲ್ಲಿ ಈಜಲು ಇಳಿದಿದ್ದಾನೆ. ಆಳವಾದ ನೀರಿನ ಸುಳಿಗೆ ಸಿಲುಕಿ, ನಾಪತ್ತೆಯಾಗಿದ್ದನು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಲಾಗಿದೆ. ಕೂಡಲೇ ಸಿಬ್ಬಂದಿ ಘಟನಾಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ, ನೀರಿನ ಹರಿವು ಹೆಚ್ಚಿದ್ದ ಕಾರಣ ರಕ್ಷಣಾ ಕಾರ್ಯ ಸಾಧ್ಯವಾಗಿರಲಿಲ್ಲ. ಇಂದು ಬೆಳಿಗ್ಗೆ ಶವವಾಗಿ ಬಾಯರಾಮ್ ಪತ್ತೆಯಾಗಿದ್ದಾನೆ.
ಪಿಎಸ್ಐ ಹಣಮಂತು ಬಂಕಳಗಿ ಮತ್ತು ಪೊಲೀಸರು ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಶವವನ್ನು ಹೊರ ತೆಗೆದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.