ಯಾದಗಿರಿ:ಭೀಮಾ ನದಿ ಪ್ರವಾಹದಿಂದ ಈಗಾಗಲೇ ನದಿ ಪಾತ್ರದ ಹಲವು ಗ್ರಾಮಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಇದೀಗ ನದಿಯಲ್ಲಿನ ವಿಷ ಜಂತುಗಳು ಗ್ರಾಮಗಳಿಗೆ ನುಗ್ಗುವ ಭೀತಿ ಶುರುವಾಗಿದೆ.
ಭೀಮಾತೀರದ ಗ್ರಾಮಗಳ ರಸ್ತೆಗಳ ಮೇಲೆ ಮೊಸಳೆ, ಹಾವುಗಳು ಪ್ರತ್ಯಕ್ಷ..!
ಭೀಮಾ ನದಿ ತೀರದ ಪ್ರವಾಹ ಪೀಡಿತ ಗ್ರಾಮಗಳಿಗೆ ನಿನ್ನೆ ರಾತ್ರಿ ಅಧಿಕಾರಿಗಳ ತಂಡ ಪರಿವೀಕ್ಷಣೆಗೆ ತೆರಳುತ್ತಿರುವಾಗ ರಸ್ತೆ ಮೇಲೆ ಮೊಸಳೆ, ಮತ್ತು ಹೆಬ್ಬಾವು ಪ್ರತ್ಯಕ್ಷವಾಗಿವೆ.
ಭೀಮಾ ತೀರದ ಗ್ರಾಮಗಳ ರಸ್ತೆಗಳ ಮೇಲೆ ಮೊಸಳೆ, ಹಾವು ಪ್ರತ್ಯಕ್ಷವಾಗಿದ್ದು, ಜನರನ್ನ ಮತ್ತಷ್ಟು ಭಯಭೀತಿಗೊಳಿಸಿದೆ. ಪ್ರವಾಹ ಪೀಡಿತ ಗ್ರಾಮಗಳಿಗೆ ನಿನ್ನೆ ರಾತ್ರಿ ಅಧಿಕಾರಿಗಳ ತಂಡ ಪರಿವೀಕ್ಷಣೆಗೆ ತೆರಳುತ್ತಿರುವಾಗ ರಸ್ತೆ ಮೇಲೆ ಮೊಸಳೆ, ಮತ್ತು ಹೆಬ್ಬಾವು ಪ್ರತ್ಯಕ್ಷವಾಗಿವೆ.
ಜಿಲ್ಲೆಯ ವಡಗೇರಾ ತಾಲೂಕಿನ ಗೋಡಿಹಾಳ, ಅರ್ಜುಣಗಿ ರಸ್ತೆ ಮೇಲೆ ಪ್ರತ್ಯಕ್ಷವಾದ ಮೊಸಳೆ ಮತ್ತು ಹೆಬ್ಬಾವಿನ ದೃಶ್ಯಗಳನ್ನು ಸ್ಥಳೀಯರು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ರಸ್ತೆ ಮೇಲೆ ಸಂಚರಿಸುತ್ತಿದ್ದ ಮೊಸಳೆ ಮತ್ತು ಹೆಬ್ಬಾವು ಕಂಡ ಅಧಿಕಾರಿಗಳು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.