ಯಾದಗಿರಿ:ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಶಹಾಪುರದಲ್ಲಿ ದಲಿತ ಒಕ್ಕೂಟ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
ಶಿಕ್ಷಣ ಇಲಾಖೆ ಸುತ್ತೋಲೆ ಖಂಡಿಸಿ ಶಹಾಪುರದಲ್ಲಿ ಪ್ರತಿಭಟನೆ - ಶಿಕ್ಷಣ ಇಲಾಖೆ ಹೇಳಿಕೆ ಖಂಡಿಸಿ ಯಾದಗಿರಿ ದಲಿತ ಒಕ್ಕೂಟದ ಪ್ರತಿಭಟನೆ ಸುದ್ದಿ
ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎನ್ನುವ ಶಿಕ್ಷಣ ಇಲಾಖೆಯ ಸುತ್ತೋಲೆ ಖಂಡಿಸಿ ಶಹಾಪುರದಲ್ಲಿ ದಲಿತ ಒಕ್ಕೂಟ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ಶಿಕ್ಷಣ ಇಲಾಖೆ ಹೇಳಿಕೆ ಖಂಡಿಸಿ ಶಹಾಪುರದಲ್ಲಿ ಪ್ರತಿಭಟನೆ
ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎನ್ನುವ ರೀತಿಯಲ್ಲಿ ಸುತ್ತೋಲೆ ಹೊರಡಿಸಿದ್ದು ಖಂಡನೀಯ. ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಅಂತ ಪ್ರತಿಭಟನಾಕಾರರು ಆಗ್ರಹಿಸಿದ್ರು.