ಕರ್ನಾಟಕ

karnataka

ETV Bharat / state

ಅಕಾಲಿಕ ಮಳೆಗೆ ಬೆಳೆ ಹಾನಿ: ಸಂಕಷ್ಟದಲ್ಲಿ ಅನ್ನದಾತ - ಅಕಾಲಿಕ ಮಳೆಗೆ ಬೆಳೆ ಹಾನಿ

ಅಕಾಲಿಕ ಮಳೆಗೆ ಭತ್ತ ಮತ್ತು ಸಜ್ಜೆ ಬೆಳೆ ನಾಶವಾಗಿ ಸುರಪುರದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

crop loss by Premature rain in Surapur
ಸಂಕಷ್ಟದಲ್ಲಿ ಅನ್ನದಾತ

By

Published : Apr 10, 2020, 9:29 PM IST

ಸುರಪುರ (ಯಾದಗಿರಿ):ಅಕಾಲಿಕ ಮಳೆಗೆ ಅಪಾರ ಪ್ರಮಾಣದ ಭತ್ತ ಮತ್ತು ಸಜ್ಜೆ ನಾಶವಾಗಿದೆ.

ಏಪ್ರಿಲ್ 8ರಂದು ಸುರಿದ ಅಕಾಲಿಕ ಮಳೆಗೆ ತಾಲೂಕಿನಲ್ಲಿ 1,160 ಹೆಕ್ಟೇರ್ ಪ್ರದೇಶದಲ್ಲಿನ ಭತ್ತ ಮತ್ತು ಸಜ್ಜೆ ನಾಶವಾಗಿದ್ದು, ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಸತತ ಮೂರು ವರ್ಷಗಳಿಂದ ಬರಗಾಲ ಆವರಿಸಿತ್ತು. ಬಳಿಕ ಸುರಿದ ಮಳೆಯಿಂದಾಗಿ ನೆರೆ ಬಂದು ಅಪಾರ ಪ್ರಮಾಣದ ಬೆಳೆ ನಷ್ಟವಾಗಿತ್ತು. ಈಗ ಸುರಿದ ಅಕಾಲಿಕ ಮಳೆಗೆ ಭತ್ತ ಮತ್ತು ಸಜ್ಜೆ ಬೆಳೆ ನಾಶವಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಕಾಲಿಕ ಮಳೆಗೆ ಬೆಳೆ ನಾಶವಾಗಿ ಹೈರಾಣಾಗಿರುವ ರೈತರ ನೆರವಿಗೆ ಸರ್ಕಾರ ಬರಬೇಕೆಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ABOUT THE AUTHOR

...view details