ಕರ್ನಾಟಕ

karnataka

ETV Bharat / state

ಕೃಷ್ಣಾ ನದಿಯಲ್ಲಿ ಮೊಸಳೆಯೊಂದಿಗೆ ಸೆಣಸಾಡಿ ಸಾವನ್ನೇ ಗೆದ್ದು ಬಂದ ಮೀನುಗಾರ!

ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಮೀನುಗಾರನ ಮೆಲೆ ಮೊಸಳೆಯೊಂದು ದಾಳಿ ಮಾಡಿದ್ದು, ಮೊಸಳೆಯಿಂದ ಮೀನುಗಾರ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮೊಸಳೆ ದಾಳಿ
ಮೊಸಳೆ ದಾಳಿ

By

Published : Feb 3, 2020, 12:35 PM IST

ಯಾದಗಿರಿ:ಮೀನುಗಾರನೊಬ್ಬ ಮೊಸಳೆ ಬಾಯಿಗೆ ಸಿಲುಕಿ ಪಾರಾದ ಘಟನೆ ಜಿಲ್ಲೆಯ ಯಮನೂರಿನಲ್ಲಿ ನಡೆದಿದೆ.

ಸುರಪುರದ ಬೋವಿಗಲ್ಲಿಯ ಜಟ್ಟೆಪ್ಪ ನಾಗಪ್ಪ ( 40 ) ಕೃಷ್ಣಾ ನದಿಯಲ್ಲಿ ಮೊಸಳೆಯೊಂದಿಗೆ ಸೆಣಸಾಡಿ ಮೊಸಳೆ ಬಾಯಿಂದ ಸಾವನ್ನು ಗೆದ್ದಿರುವ ಸಾಹಸಿ ಮೀನುಗಾರ. ಜಟೆಪ್ಪ ನಾಗಪ್ಪ ಬೆಳಗ್ಗೆ ಕೃಷ್ಣಾ ನದಿಯಲ್ಲಿ ಎಂದಿನಂತೆ ಮೀನು ಹಿಡಿಯಲು ಹೋಗಿದ್ದ. ಈ ವೇಳೆ ದಡದ ಸಮೀಪವಿದ್ದ ಮೊಸಳೆಯೊಂದು ಜಟ್ಟೆಪ್ಪರ ಎಡಗಾಲನ್ನು ಹಿಡಿದಿದೆ. ಇದಕ್ಕೆ ಧೃತಿಗೆಡದ ಜಟೆಪ್ಪ, ಸಾಹಸದಿಂದ ಅದರ ಹಿಡಿತದಿಂದ ತಪ್ಪಿಸಿಕೊಂಡಿದ್ದಾನೆ. ತೀವ್ರವಾಗಿ ಗಾಯಗೊಂಡ ಅವರನ್ನು ಸುರಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಜಟೆಪ್ಪನ ಕಾಲಿಗೆ 16 ಹೊಲಿಗೆ ಹಾಕಲಾಗಿದೆ.

ಮೊಸಳೆ ದಾಳಿಯಿಂದ ಗಾಯ: ಕಾಲಿಗೆ 16 ಹೊಲಿಗೆ

ಇತ್ತೀಚೆಗೆ ಕೃಷ್ಣಾ ನದಿಯಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ABOUT THE AUTHOR

...view details