ಕರ್ನಾಟಕ

karnataka

ETV Bharat / state

ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ: ಕೊಲೆ ಶಂಕೆ - Yadagiri murder

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಾಗನಟಗಿ ಹಾಗೂ ಬಾಣತಿಹಾಳ ಗ್ರಾಮದ ಮಧ್ಯೆ ಇರುವ ಕಾಲುವೆಯಲ್ಲಿ ಸುರೇಶ ಎಂಬ ವ್ಯಕ್ತಿಯ ಶವ ದೊರೆತಿದೆ. ಇವರು ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದರು.

ಅಮಾನುಷವಾಗಿ ವ್ಯಕ್ತಿಯ ಕೊಲೆ

By

Published : Sep 12, 2019, 8:00 PM IST

ಯಾದಗಿರಿ: ಅಮಾನುಷವಾಗಿ ವ್ಯಕ್ತಿಯನ್ನು ಕೊಲೆ ಮಾಡಿ ಯಾರೋ ಕಾಲುವೆಯ ನೀರಿಗೆ ಎಸೆದು ಹಾಕಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ನಡೆದಿದೆ.

ಜಿಲ್ಲೆಯ ಶಹಾಪುರ ತಾಲೂಕಿನ ನಾಗನಟಗಿ ಹಾಗೂ ಬಾಣತಿಹಾಳ ಗ್ರಾಮದ ಮಧ್ಯೆಯಿರುವ ಕಾಲುವೆಯಲ್ಲಿ ಸುರೇಶ ಎನ್ನುವ ವ್ಯಕ್ತಿಯನ್ನು ಕೊಲೆ ಮಾಡಿ ಎಸೆದಿದ್ದಾರೆ ಎನ್ನಲಾಗುತ್ತಿದೆ. ಶಹಾಪುರ ಕ್ಷೇತ್ರದ ಹಳಿಸಾಗರ ಗ್ರಾಮದ ರಾಜು ಹಾಗೂ ರೇಣುಕಮ್ಮನವರ ಮಗ ಸುರೇಶ ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ಅಮಾನುಷವಾಗಿ ವ್ಯಕ್ತಿಯ ಕೊಲೆ

ಕೊಲೆಯಾದ ಯುವಕ ಸುರೇಶ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ. ಬಳಿಕ ಪೋಷಕರು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು. ಸುರೇಶ ಕೆಲ ದಿನಗಳ ಹಿಂದೆ ದ್ವಿಚಕ್ರ ವಾಹನ ತೆಗೆದುಕೊಂಡು ಮನೆಯಿಂದ ಹೋಗಿದ್ದ. ಆದ್ರೆ ಹಲವು ದಿನಗಳು ಕಳೆದ್ರೂ ಮನೆಗೆ ಹಿಂತಿರುಗಿರುವುದಿಲ್ಲ. ಹೀಗಾಗಿ ಪೋಷಕರು ಪ್ರಕರಣ ದಾಖಲಿಸಿದ್ದರು.

ಆದ್ರೆ ಏಕಾಏಕಿ ಸುರೇಶ ನಾಗಣಟಗಿ ಗ್ರಾಮದ ಕಾಲುವೆಯಲ್ಲಿ ಅಮಾನುಷವಾಗಿ ಕೊಲೆಯಾಗಿದ್ದಾನೆ. ಸುರೇಶನ ದ್ವಿಚಕ್ರ ವಾಹನ ಬಾಣತಿಹಾಳ ಕಾಲುವೆಯಲ್ಲಿ ಸಿಕ್ಕಿದೆ. ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details