ಸುರಪುರ: ಕೊರೊನಾ ಮಾನವ ಜನಾಂಗಕ್ಕೆ ಅಂಟಿದ ಮಹಾಮಾರಿ. ಅದರ ನಿರ್ಮೂಲನೆಗೆ ಜಾತಿ, ಮತ ಧರ್ಮಗಳ ಭೇದವಿಲ್ಲದೆ ಎಲ್ಲರೂ ಜಾಗೃತಿ ಮೂಡಿಸಬೇಕಿದೆ. ಲಾಕ್‌ಡೌನ್ ಆದೇಶ ಪಾಲಿಸಬೇಕಿದೆ ಎಂದು ಕೆಂಬಾವಿ ಪಿಎಸ್‌ಐ ಸುದರ್ಶನ್ ರೆಡ್ಡಿ ಮನವಿ ಮಾಡಿದರು.
ಕೊರೊನಾ ನಿರ್ಮೂಲನೆಗೆ ಜಾತಿ, ಮತ ಧರ್ಮಗಳ ಭೇದವಿಲ್ಲ.. - awareness about corona virus
ಸಯ್ಯದ್ ಹುಸೇನ್, ಮೌಲಾನಾ ಬಂದೇನವಾಜ್, ನಾಲತ್ವಾಡ ರಫೀಕ್ ಸಾಸನೂರು ಸೇರಿ ಹಲವರು ಗ್ರಾಮದಲ್ಲಿ ಜಾಗೃತಿ ಮೂಡಿಸಿದರು. ಬೇಡ ಜನಾಂಗಕ್ಕೆ ದಿನಸಿ ವಿತರಿಸಿ ಮಾನವೀಯತೆ ಮೆರೆದರು.
ಪಿಎಸ್‌ಐ ಸುದರ್ಶನ್ ರೆಡ್ಡಿ
ಆಹಾರ ಧಾನ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಾಕ್ಡೌನ್ನಿಂದ ಕೆಲವರಿಗೆ ತೊಂದರೆಯಾಗಿದೆ. ಅಂತಹವರಿಗೆ ಸಹಾಯ ಮಾಡುವುದು ಮಾನವೀಯತೆ. ಅದಕ್ಕೆ ಧರ್ಮ-ಜಾತಿಗಳ ಹಂಗಿಲ್ಲ ಎಂದರು.