ಕರ್ನಾಟಕ

karnataka

ETV Bharat / state

ಸುರಪುರದ ಶಿಕ್ಷಕನಿಗೆ ಕೊರೊನಾ ದೃಢ.. ಪರೀಕ್ಷಾ ಕೇಂದ್ರಗಳಿಗೆ ಸಂಪೂರ್ಣ ಸ್ಯಾನಿಟೈಸ್​!! - Corona for teachers

ಎಸ್​​ಎಸ್​​ಎಲ್​ಸಿ ಪರೀಕ್ಷೆಗೆ ನೇಮಕವಾಗಿದ್ದ ಶಿಕ್ಷಕರೊಬ್ಬರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಇದೀಗ ತಾಲೂಕಿನಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಕೆಂಭಾವಿ ಪಟ್ಟಣದ 6 ಪರೀಕ್ಷಾ ಕ್ರಂದ್ರಗಳನ್ನೂ ಸ್ಯಾನಿಟೈಸ್ ಮಾಡಲಾಗಿದೆ..

Corona virus confirmed in Surapura teacher: complete sanitize for test centers
ಸುರಪುರದ ಶಿಕ್ಷಕನಿಗೆ ಕೊರೊನಾ ದೃಢ: ಪರೀಕ್ಷಾ ಕೇಂದ್ರಗಳಿಗೆ ಸಂಪೂರ್ಣ ಸ್ಯಾನಿಟೈಸ್​

By

Published : Jun 26, 2020, 8:51 PM IST

ಸುರಪುರ (ಯಾದಗಿರಿ): ಜಿಲ್ಲೆಯಲ್ಲಿ ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಹುಣಸಗಿ ಪಟ್ಟಣದ ಶಿಕ್ಷಕರೊಬ್ಬರಿಗೆ ಸೋಂಕು ಹರಡಿರುವ ಪ್ರಕರಣ ವರದಿಯಾಗಿದೆ.

ಈ ಶಿಕ್ಷಕ ನಿನ್ನೆ ನಡೆದ ಪರೀಕ್ಷೆಯಲ್ಲಿ ಕೆಂಭಾವಿ ಪರೀಕ್ಷಾ ಕೇಂದ್ರದಲ್ಲಿ ಸೇವೆಯಲ್ಲಿ ತೊಡಗಿದ್ದರು. ಈ ಹಿನ್ನೆಲೆ ಕೆಂಭಾವಿ ಪಟ್ಟಣದಲ್ಲಿ 6 ಪರೀಕ್ಷಾ ಕೇಂದ್ರಗಳಿವೆ. ನಾಳಿನ ಪರೀಕ್ಷೆಗೆಂದು ಪುರಸಭೆಯಿಂದ ಪಟ್ಟಣದ ಪದವಿಪೂರ್ವ ಕಾಲೇಜು, ಮೂರಾರ್ಜಿ ವಸತಿ ಶಾಲೆ, ಹೋಲಿಪೇಥ್‌ ಸ್ಕೂಲ್, ಹೇಮರೆಡ್ಡಿ ಮಲ್ಲಮ್ಮ ಶಾಲೆ, ಬಾಲಕಿಯರ ಹೈಸ್ಕೂಲ್​ಗಳಿಗೆ ಸ್ಯಾನಿಟೈಸ್​ ಮಾಡಲಾಗಿದೆ.

ಸುರಪುರದ ಶಿಕ್ಷಕನಿಗೆ ಕೊರೊನಾ ದೃಢ.. ಪರೀಕ್ಷಾ ಕೇಂದ್ರಗಳಿಗೆ ಸಂಪೂರ್ಣ ಸ್ಯಾನಿಟೈಸ್..​

ವಲಯದ ವಿವಿಧೆಡೆಯಿಂದ ಸುಮಾರು 1,300 ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಮೊದಲ ಪರೀಕ್ಷೆ ಯಶಸ್ವಿಯಾಗಿದ್ದು, ಅದರಂತೆಯೇ ಮುಂದಿನ ಪರೀಕ್ಷೆಗಳು ಸುಗಮವಾಗಿ ಆರೋಗ್ಯಕರವಾಗಿರಲಿ ಎಂದು ಮುತುವರ್ಜಿವಹಿಸಲಾಗುತ್ತಿದೆ.

ಪರೀಕ್ಷಾ ಕೇಂದ್ರಗಳ ಗೋಡೆಗಳು, ಕುಳಿತುಕೊಳ್ಳುವ ಬೆಂಚ್​​, ಶೌಚಾಲಯ ಹಾಗೂ ಹೊರಾಂಗಣ, ಆಫೀಸ್​​ ರೂಮ್ ಹೀಗೆ ಎಲ್ಲಾ ಕಡೆ ಸ್ಯಾನಿಟೈಸ್​​​​ ಮಾಡಿದರು.

ಕೆಂಭಾವಿಯಲ್ಲಿನ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಕೊರೊನಾ ಆತಂಕ ಹೆಚ್ಚಾಗಿದೆ. ನಾಳಿನ ಪರೀಕ್ಷೆ ಆತಂಕವಿಲ್ಲದೆ ನಡೆಯಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

ABOUT THE AUTHOR

...view details